ಶಿವಮೊಗ್ಗ: ಅಂಚೆ ನೌಕರರು ಅಭದ್ರತೆ ಮತ್ತು ಭಯದ ನಡುವೆ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಐಪಿಇಯು ಗ್ರೂಪ್ ‘ಸಿ’ ಕೇಂದ್ರ ಸಂಘ ಪ್ರಧಾನ ಕಾರ್ಯದರ್ಶಿ ಆರ್.ಎನ್. ಪರಾಶರ್ ಬೇಸರಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘಗಳು ಗ್ರೂಪ್ ‘ಸಿ’ ಪೋಸ್ಟ್‌ಮನ್, ಎಂಟಿಎಸ್ ಶಿವಮೊಗ್ಗ ವಿಭಾಗದ 50ನೇ ಜಂಟಿ ದ್ವೈವಾರ್ಷಿಕ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.
‘ಇದು ತವಕ, ತಲ್ಲಣಗಳ ಕಾಲವಾಗಿದ್ದು, ಅನೇಕ ಸ್ಥಿತ್ಯಂತರಗಳು ಘಟಿಸುತ್ತಿವೆ. ಸರ್ಕಾರದ ಕೆಲವು ನಿಯಮಗಳಿಂದಾಗಿ ನೌಕರರ ವರ್ಗ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.ನೌಕರರು ಹಲವು ಸವಾಲುಗಳ ನಡುವೆ ಕೆಲಸ ಮಾಡಬೇಕಿದೆ. ಬಿಎಸ್ಎನ್ಎಲ್ ಪರಿಸ್ಥಿತಿ ಏನಾಗಿದೆ ಎಂಬುದು ನಮ್ಮ ಕಣ್ಣೆದುರೇ ಇದೆ’ ಎಂದರು.
ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕರ್ನಾಟಕ ಅಂಚೆ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್, ‘ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಅಂಚೆ ಇಲಾಖೆ ಔಷಧ, ದಿನಸಿ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಸೇರಿ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳು ಮಾಸಾಶನ ತಲುಪಿಸಿದೆ. ಸಂಕಷ್ಟದ ಸಂದರ್ಭದಲ್ಲೂ ನಮ್ಮ ನೌಕರರು ಕೆಲಸ ಮಾಡಿದ್ದಾರೆ’ ಎಂದುಹೇಳಿದರು.
ಎಐಪಿಇಯು ಗ್ರೂಪ್ ‘ಸಿ’ ವಿಭಾಗೀಯ ಅಧ್ಯಕ್ಷ ಟಿ.ಕೆ. ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್. ಮೂರ್ತಿ, ಎಐಪಿಇಯು ಪೋಸ್ಟ್‌ಮನ್ ಮತ್ತು ಎಂಟಿಎಸ್ ಕೇಂದ್ರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಬಿ. ಮೊಹಂತಿ, ಅಂಚೆ ಅಧೀಕ್ಷಕ ಜಿ. ಹರೀಶ್, ಎ.ಐ.ಆರ್.ಎಂ.ಎಸ್. ವಲಯ ಕಾರ್ಯದರ್ಶಿ ಎ. ಶ್ರೀನಿವಾಸ್, ಜಾನಕಿರಾಮ್, ಮಲ್ಲಿಕಾರ್ಜುನ್ ಎಚ್.ಆರ್. ಈಶ್ವರಪ್ಪ, ಎಸ್.ಎಸ್. ಮಂಜುನಾಥ್ ಇದ್ದರು.
ಚಂದ್ರಶೇಖರ್ ಹಿರೇಗೋಣಿಗೆರೆ, ಪ್ರೀತಿ ಎನ್.ಎಸ್. ಕಾರ್ಯಕ್ರಮ ನಿರೂಪಿಸಿದರು. ಜಿ. ರಾಘವೇಂದ್ರ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.