ನಾಲೆ ರಸ್ತೆಗೆ ಪುನೀತ್ ಹೆಸರು

ಶಿವಮೊಗ್ಗ: ನಗರದ ಲಕ್ಷ್ಮೀ ಟಾಕೀಸ್ ಬಳಿಯ ನಾಲೆ ರಸ್ತೆಗೆ ‘ಪುನೀತ್ ರಾಜ್‌ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲಾಗಿದೆ.
ಅಕಾಲಿಕ ಮರಣ ಹೊಂದಿದ ಪುನೀತ್ ರಾಜ್‌ಕುಮಾರ್ ನೆನಪಿಗೆ ಸಾರ್ವಜನಿಕರೇ ಸೇರಿ ‘ಪುನೀತ್ ರಾಜ್‌ಕುಮಾರ್ ರಸ್ತೆ’ ಎಂಬ ನಾಮಫಲಕ ಇಟ್ಟು ಉದ್ಘಾಟಿಸಿದ್ದಾರೆ. ಈ ಹೆಸರನ್ನು ಅಧಿಕೃತಗೊಳಿಸಲು ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದ್ದಾರೆ.
ಸ್ಥಳೀಯ ಮುಖಂಡರಾದ ಜ್ಯೋತಿ ಅರಳಪ್ಪ, ಪ್ರಜಾಕೀಯ ವೆಂಕಟೇಶ್, ನರಸಿಂಹ ಗಂಧದಮನೆ, ಹರೀಶ್, ಸಿದ್ದರಾಜ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.