ಶನಿವಾರ, ಮೇ 28, 2022
31 °C
ರೋಗದ ಹತೋಟಿಗೆ ಹಲವು ಶಿಫಾರಸು ಮಾಡಿದ ಸಿಪಿಸಿಆರ್‌ಐ ತಂಡ

ಎಲೆಚುಕ್ಕಿ ರೋಗದ ಕ್ಷಿಪ್ರ ಹರಡುವಿಕೆ ಕಳವಳಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ‘ಅಡಿಕೆಗೆ ಎಲೆಚುಕ್ಕಿ ರೋಗ ಹೊಸತೇನಲ್ಲ. ಆದರೆ ಈ ಬಾರಿ ಅದರ ಹರಡುವಿಕೆಯ ವೇಗ ಕಳವಳಕಾರಿಯಾಗಿದೆ’ ಎಂದು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿದೆ.

ಕೇರಳದ ಕಾಸರಗೋಡಿನಲ್ಲಿ ಕೇಂದ್ರದ ಸಿಪಿಸಿಆರ್‌ಐನ ವಿಜ್ಞಾನಿಗಳಾದ ಡಾ.ವಿನಾಯಕ ಹೆಗ್ಡೆ, ಡಾ.ರವಿ ಭಟ್, ಶಂಕಣ್ಣ ಶ್ಯಾನುಭೋಗ ಅವರ ನೇತೃತ್ವದ ತಂಡ ತಾಲ್ಲೂಕಿನ ನಿಟ್ಟೂರಿನಲ್ಲಿ ಎರಡು ವಾರಗಳ ಹಿಂದೆ ಎಲೆಚುಕ್ಕಿ ರೋಗದ ಉಲ್ಬಣದ ಬಗ್ಗೆ ಅಧ್ಯಯನ ನಡೆಸಿ ಈಚೆಗೆ ಸರ್ಕಾರಕ್ಕೆ ವರದಿ ನೀಡಿದೆ.

2019ರಲ್ಲಿ ಚಿಕ್ಕಮಗಳೂರಿನ ಕಳಸದಲ್ಲೂ ಕಂಡುಬಂದಿತ್ತು ಎಂದು ವರದಿ ನೀಡಿರುವ ತಂಡ ರೋಗ ನಿಯಂತ್ರಣದ ಬಗ್ಗೆ ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

‘ಈ ಭಾಗದ ಮಣ್ಣಿನಲ್ಲಿ ಮಾತ್ರವಲ್ಲದೆ ಅಡಿಕೆ ಮರಗಳ ಎಲೆಗಳಲ್ಲೂ ಪೊಟ್ಯಾಶ್‌ ಅಂಶದ ಕೊರತೆ ಕಂಡುಬಂದಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತೇವಾಂಶ ಅತಿಯಾಗಿರುವುದೂ ಕಾರಣವಾಗಿದೆ. ರೋಗದ ಗುಣಲಕ್ಷಣ ಕಂಡುಬಂದ ಅಡಿಕೆ ಮರಗಳ ಒಣಗಿದಂತೆ ಕಂಡುಬರುವದ ಕೆಳಭಾಗದ ಎರಡರಿಂದ ಮೂರು ಹೆಡೆಗಳನ್ನು ವಿಮುಖಗೊಳಿಸಬೇಕು. ಆ ಹೆಡೆಗಳನ್ನು ಹಾಗೆ ಎಲ್ಲೆಂದರೆಲ್ಲಿ ಬಿಡದೆ ಸುಟ್ಟು ಹಾಕಬೇಕು’ ಎಂದು ತಿಳಿಸಿದೆ.

‘ಹೆಕ್ಸೋಕೋನೋಜಾಲ್(ಶೇ 0.2) 2ಮಿಲಿ ಲೀಟರ್ ನೀರಿಗೆ ಬೆರೆಸಿ ಪ್ರತಿ 30 ದಿನದಿಂದ 40 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು. ಅಥವಾ ಕಾರ್ಭೆಂಡೇಜಿಯಂ ಶೇ 12, ಮ್ಯಾಂಕೋಜಬ್ ಶೇ 63(ಸಾಪ್) 2.5 ಗ್ರಾಂ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು’ ಎಂದು ತಿಳಿಸಿದೆ.

ಗಾಳಿಯಲ್ಲಿ ವೇಗವಾಗಿ ಹರಡುವ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಕೇವಲ ಒಂದು ತೋಟಕ್ಕೆ ಔಷಧ ಸಿಂಪಡಿಸಿದರೆ ಯಾವುದೇ ಪ್ರಯೋಜನವಿಲ್ಲ. ಸಾಮೂಹಿಕವಾಗಿ ಔಷಧ ಸಿಂಪಡಣೆಗೆ ಒತ್ತು ನೀಡಬೇಕು’ ಎಂದೂ ಅಭಿಪ್ರಾಯಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು