ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ರಾಜಾಕಾಲುವೆಗಳ ಹೂಳು ತೆಗೆಸಲು ಆಗ್ರಹ

Last Updated 28 ಮೇ 2020, 10:34 IST
ಅಕ್ಷರ ಗಾತ್ರ

ಶಿವಮೊಗ್ಗ: ಮಳೆ ಆರಂಭಕ್ಕೂ ಮೊದಲು ಪಾಲಿಕೆ ವ್ಯಾಪ್ತಿಯ ಎಲ್ಲ ರಾಜಕಾಲುವೆಗಳ ಹೂಳುತೆಗೆಸಬೇಕು. ಮಳೆಗಾಲದಲ್ಲಿ ಆಗುವ ಅನಾಹುತ ತಪ್ಪಿಸಬೇಕು ಎಂದು ಒತ್ತಾಯಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಬಹುತೇಕ ರಾಜಕಾಲುವೆಗಳಲ್ಲಿ ಹೂಳುತುಂಬಿದೆ.ಮಳೆ ಬಂದರೆಕಾಲುವೆ ತುಂಬಿಬಡಾವಣೆಗಳಲ್ಲಿನಮನೆಗಳಿಗೆ ಕೊಳಚೆ ನೀರು ನುಗ್ಗುತ್ತದೆ. ಪ್ರತಿ ವರ್ಷವೂ ಸಾಕಷ್ಟು ಹಾನಿಯಾಗುತ್ತದೆ. ಅಲ್ಲದೇ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ.ಪಾಲಿಕೆ ಆಯುಕ್ತರು ರಾಜಕಾಲುವೆಗಳಲ್ಲಿ ಇರುವ ಹೂಳುತೆಗೆಸಲು ತಕ್ಷಣಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆಗಸ್ಟ್‌ನಲ್ಲಿ ಬಂದ ನೆರೆ ಹಾವಳಿಯಿಂದ ಪಾಲಿಕೆ ವ್ಯಾಪ್ತಿಯ ಸಾವಿರಾರು ಜನರು ನಿರಾಶ್ರಿತರಾಗಿ ಮನೆ ಕಳೆದುಕೊಂಡಿದ್ದರು.ಕೋಟ್ಯಂತರ ರೂಪಾಯಿ ನಷ್ಟವಾಗಿವೆ. ಹಲವುವರ್ಷಗಳಿಂದ ಹೂಳು ತುಂಬಿದೆ. ಮಳೆ ಬಂದಸಮಯದಲ್ಲಿನೀರು ಸರಾಗವಾಗಿ ಹರಿಯುತ್ತಿಲ್ಲ. ಇದಕ್ಕೆ ಪಾಲಿಕೆಯ ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿದರು.

ಎಚ್1ಎನ್1, ಕಾಲರಾ, ಮಲೆರಿಯಾ, ಡೆಂಗೆ ರೋಗಗಳಿಂದ ನರಳುತ್ತಿದ್ದಾರೆ. ಬಾಪೂಜಿ ನಗರ, ಭಾರತಿಕಾಲೊನಿ, ಇಮಾಂ ಬಡಾವಣೆ, ಎಚ್.ಸಿದ್ದಯ್ಯ ರಸ್ತೆ ಸೇರಿದಂತೆ ಹಲವುಬಡಾವಣೆಗಳು ಪ್ರತಿ ವರ್ಷವೂ ಕೊಳಚೆ ನೀರಿನಲ್ಲಿ ಮುಳುಗುತ್ತವೆ.ಹಾಗಾಗಿ, ತಕ್ಷಣವೇಅಧಿಕಾರಿಗಳ ಸಭೆ ಕರೆಯಬೇಕು.ಪ್ರತಿಯೊಂದು ರಾಜಕಾಲುವೆಗಳ ಹೂಳು ತೆಗೆಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಪ್ರಮುಖರಾದ ಅಶೋಕ್ ಯಾದವ್, ಸುಬ್ರಮಣ್ಯ, ಡಾ.ಬಿ.ಎಂ.ಚಿಕ್ಕಸ್ವಾಮಿ, ವೆಂಕಟನಾರಾಯಣ್, ಸುಬ್ಬಣ್ಣಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT