ಸೋಮವಾರ, ಜೂನ್ 14, 2021
27 °C

ಕೊರೊನಾ ಸಂಕಷ್ಟಕ್ಕೆ ಸಂಘ –ಸಂಸ್ಥೆಗಳ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗುತ್ತಿಲ್ಲ. ಆಮ್ಲಜನಕದ ಕೊರತೆ ಕಾಡುತ್ತಿದ್ದಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ನಗರದ ವಿವಿಧ ಸಂಘ–ಸಂಸ್ಥೆಗಳು ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿದ್ದಾರೆ.

ಸೌರಭದಿಂದ ಆಂಬುಲೆನ್ಸ್ ಸೌಲಭ್ಯ: ಕೊರೊನಾದಿಂದ ತೊಂದರೆಗೆ ಒಳಗಾದವರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶ ದಿಂದ ನಗರದ ಸೌರಭ ಸಂಸ್ಥೆಯ ಸಂಸ್ಥೆಯ ಮುಖ್ಯಸ್ಥ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಎರಡು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುವ ಕಾಂಗ್ರೆಸ್‌ನಿಂದ ಹಸಿದವರಿಗೆ ಅನ್ನ: ಲಾಕ್‌ಡೌನ್‌ನಿಂದಾಗಿ ಹೋಟೆಲ್‌ ಗಳು ಬಾಗಿಲು ಮುಚ್ಚಿರುವುದರಿಂದ ನಿರಾಶ್ರಿತರು ಊಟ ಸಿಗದೆ ಪ‍ರದಾಡುತ್ತಿದ್ದು, ಜಿಲ್ಲಾ ಯುವ ಕಾಂಗ್ರೆಸ್ ‘ಹಸಿದವರಿಗೆ ಅನ್ನ’ ಕಾರ್ಯಕ್ರಮದಡಿ ಆಹಾರದ ಪೊಟ್ಟಣ ಹಾಗೂ ನೀರಿನ ಬಾಟಲ್‌ಗಳನ್ನು ನೀಡುತ್ತಿದೆ. 11 ದಿವಸಗಳಿಂದ ಈ ಕಾರ್ಯ ನಡೆಯುತ್ತಿದೆ.

ಶನಿವಾರವೂ ನಗರದ ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮೆಗ್ಗಾನ್ ಆಸ್ಪತ್ರೆ ಹಾಗೂ ಹಲವು ಖಾಸಗಿ ಆಸ್ಪತ್ರೆಗಳ ಮುಂಭಾಗ ಆಹಾರದ ಅವಶ್ಯಕತೆ ಇರುವ ರೋಗಿಗಳ ಸಂಬಂಧಿಗಳಿಗೆ ಆಹಾರ ವಿತರಿಸಲಾಯಿತು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಗಿರೀಶ್, ದಕ್ಷಿಣ ಬ್ಲಾಕ್ ಎಸ್. ಕುಮರೇಶ್ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ವೆಂಕಟೇಶ, ಸುಹಾಸ್, ಶಂಕರ್, ಸಂಜಯ್ ಇದ್ದರು.

ಮಾಸ್ಕ್, ಸ್ಯಾನಿಟೈಜರ್ ವಿತರಣೆ: ವಿಶ್ವ ಹಿಂದೂ ಪರಿಷದ್-ಬಜರಂಗದಳ ಶಿವಮೊಗ್ಗ ದುರ್ಗಿ ಪ್ರಖಂಡ ಹಾಗೂ ಸಂಸ್ಕೃತಿ ಫೌಂಡೇಶನ್ ವತಿಯಿಂದ ಶನಿವಾರ  ಜೈಲು ರಸ್ತೆ, ಕೆನರಾ ಬ್ಯಾಂಕ್ ಮುಂಭಾಗ ಬಸ್‌ ನಿಲ್ದಾಣದ ಬಳಿ ದಿನಪತ್ರಿಕೆ ಹಂಚುವವರಿಗೆ ಮಾಸ್ಕ್, ಸ್ಯಾನಿಟೈಜರ್, ಹ್ಯಾಂಡ್ ಗ್ಲೌಸ್ ನೀಡಲಾಯಿತು.

ಸಂಸ್ಕೃತಿ ಫೌಂಡೇಶನ್‌ನ ಶರಣ್, ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ವಿಶ್ವ ಹಿಂದೂ ಪರಿಷತ್ ನಗರ ಸಹ ಕಾರ್ಯದರ್ಶಿ ಮಂಜುಶೇಟ್, ಸುರೇಶ್ ಬಾಬು, ದುರ್ಗಿ ಪ್ರಖಂಡ ಅಧ್ಯಕ್ಷ ಪ್ರಶಾಂತ್ (ಪುಟ್ಟಣ್ಣ), ಗಂಗಾಧರ, ಪವನ, ಶ್ರೇಯಸ್ ಹಾಗೂ ಜಿಲ್ಲಾ ದಿನಪತ್ರಿಕೆ ವಿತರಕ ಸಂಘದ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಎಚ್.ಅರುಣ್ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.