ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನಗಳ ಇತಿಹಾಸವಿರುವ ಶರಣ ಸಂಸ್ಕೃತಿ ಮುಂದುವರಿಸಿ

ದಿ.ರುದ್ರಮುನಿ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ
Last Updated 8 ಅಕ್ಟೋಬರ್ 2022, 5:51 IST
ಅಕ್ಷರ ಗಾತ್ರ

ಶಿಕಾರಿಪುರ: ‘ಶಿಕಾರಿಪುರ ತಾಲ್ಲೂಕಿನ ಶರಣ ಸಂಸ್ಕೃತಿಗೆ ಶತಮಾನಗಳ ಇತಿಹಾಸ ಇದೆ. ಈ ಶರಣ ಸಂಸ್ಕೃತಿಯನ್ನು ನೀವು ಮುಂದುವರಿಸಬೇಕು’ ಎಂದು ಸಿರಿಗೆರೆ ತರಳುಬಾಳು ಪೀಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ಶುಕ್ರವಾರ ನಡೆದ ಪೀಠಾಧ್ಯಕ್ಷ ದಿ. ರುದ್ರಮುನಿ ಶಿವಯೋಗಿಗಳ 34ನೇ ವರ್ಷದ ಪುಣ್ಯಾರಾಧನೆ ಹಾಗೂ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ತಾಲ್ಲೂಕಿನಲ್ಲಿ ಜನಿಸಿದ ಶರಣರು ಕಲ್ಯಾಣಕ್ಕೆ ಹೋಗಿ ಜನರ ಕಲ್ಯಾಣಕ್ಕಾಗಿ ಚಿಂತನೆ ನಡೆಸಿದ್ದರು. ಕಾಳೇನಹಳ್ಳಿ ಶಿವಯೋಗಾಶ್ರಮದ ದಿ.ರುದ್ರಮುನಿ ಶಿವಯೋಗಿಗಳು ಮಹಾನ್ ಸಾತ್ವಿಕ ಶಕ್ತಿ ಹೊಂದಿದ್ದರು. ಬುದ್ಧಿ ಶಕ್ತಿ ಪ್ರಖರವಾಗಿ ಬೆಳೆಯಲು ಪ್ರವಚನ ಕಾರ್ಯಕ್ರಮಗಳು ಸಹಕಾರಿಯಾಗಲಿದ್ದು, ನಿಮ್ಮ ಜ್ಞಾನ ಜಾಗೃತವಾಗುತ್ತದೆ’ ಎಂದು ಸಲಹೆ ನೀಡಿದರು.

ಸಂಸದ ಹಾಗೂ ಪುಣ್ಯಾರಾಧನೆ ಕಾರ್ಯಕ್ರಮ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಿ.ವೈ. ರಾಘವೇಂದ್ರ, ‘ಮಲೆನಾಡಿನ ಶಿವಯೋಗಾಶ್ರಮದ ಪೀಠಾಧ್ಯಕ್ಷರಾಗಿದ್ದ ದಿ.ರುದ್ರಮುನಿ ಶಿವಯೋಗಿಗಳು ಪವಾಡ ಪುರುಷರಾಗಿದ್ದರು. ಪ್ರಾಣಿ ಪಕ್ಷಿಗಳೊಂದಿಗೆ ಮಾತನಾಡುತ್ತಿದ್ದರು. ಕಾಯಕ ಜೀವಿಯಾಗಿದ್ದ ಅವರು ತಾವೇ ಕೃಷಿ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ರುದ್ರಮುನಿ ಶ್ರೀಗಳ ಇತಿಹಾಸ ತಿಳಿಸಲು ಈ ಪುಣ್ಯಾರಾಧನೆ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ನೇತೃತ್ವ ವಹಿಸಿದ್ದ ಕಾಳೇನಹಳ್ಳಿ ಶಿವಯೋಗಾಶ್ರಮದ ಪೀಠಾಧ್ಯಕ್ಷ ಡಾ.ಸಿದ್ಧಲಿಂಗಸ್ವಾಮೀಜಿ, ‘ಮನುಷ್ಯ ಬದುಕಲು ಅತ್ಯುತ್ತಮ ವಿಚಾರಗಳು ಬೇಕು. ಬಸವಾದಿ ಶರಣರ ಸಿದ್ಧಾಂತಗಳು ಸುಳ್ಳಲ್ಲ. ಅವರ ಚಿಂತನೆಗಳು ವೈಜ್ಞಾನಿಕವಾಗಿವೆ. ಶರಣರ ಚಿಂತನೆ ಜೀವನದಲ್ಲಿ ಅಳವಡಿಸಿಕೊಂಡಾಗ ಲಾಭವಾಗುತ್ತದೆ’ ಎಂದು ಸಲಹೆ ನೀಡಿದರು.

ಮುದಗಲ್ ಕಲ್ಯಾಣ ಅ‍ಶ್ರಮದ ಮಹಾಂತ ಸ್ವ‍ಾಮೀಜಿ ದಿ.ರುದ್ರಮುನಿ ಶ್ರೀಗಳ ಕುರಿತು ಪ್ರವಚನ
ನೀಡಿದರು.

ಕೂಡಲ ಗುರುನಂಜೇಶ್ವರ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಡೇನಂದಿಹಳ್ಳಿ ಮಠದ ವೀರಭದ್ರಸ್ವಾಮೀಜಿ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಉಪಾಧ್ಯಕ್ಷ ಕೆ. ರೇವಣಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ,ವಿವಿಧ ನಿಗಮ ಮಂಡಳಿ ನಿರ್ದೇಶಕರಾದ ಗಾಯತ್ರಿದೇವಿ, ಹೊಸೂರು ರುದ್ರೇಶ್, ರುದ್ರಪಯ್ಯ, ವಿವಿಧ ಸಮಾಜದ ಅಧ್ಯಕ್ಷರಾದ ಕೆ.ಎಚ್. ಪುಟ್ಟಸ್ವಾಮಿ, ಕೆ.ಪಿ. ರುದ್ರಪ್ಪ,
ಎನ್.ಜಿ. ರಾಜಶೇಖರ್, ಗಂಗೊಳ್ಳಿ ನಾಗರಾಜಪ್ಪ, ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT