ಶುಕ್ರವಾರ, ಮಾರ್ಚ್ 5, 2021
30 °C

ಹುಣಸೋಡು ಸ್ಫೋಟ ಮತ್ತು ಭೂ ಕಂಪನ: ಬಗೆಹರಿಯದ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಹುಣಸೋಡು ಕ್ವಾರಿ ಬಳಿ ನಡೆದ ಸ್ಫೋಟದಲ್ಲಿ ಅಕ್ಕಪಕ್ಕದ ಕೆಲವು ಮನೆಗಳು ಬಿರುಕು ಬಿಟ್ಟಿದ್ದರೂ, ದೊಡ್ಡ ಪ್ರಮಾಣದ ಅನಾಹುತ ನಡೆದಿಲ್ಲ. ಸ್ಫೋಟದ ಮಗ್ಗುಲಲ್ಲೇ ಇರುವ ಮನೆಯ ಹೆಂಚುಗಳು ಕೆಳಗೆ ಬಿದ್ದಿಲ್ಲ. ಕಂದಕವೂ ನಿರ್ಮಾಣವಾಗಿಲ್ಲ.

ಸ್ಥಳೀಯರ ಮಾಹಿತಿ ಪ್ರಕಾರ ಸ್ಫೋಟವಾದಾಗ ಲಾರಿ ಮೇಲಕ್ಕೆ ಚಿಮ್ಮಿ ಕೆಳಗೆ ಬಿದ್ದಿದೆ. ಭಾರಿ ಶಬ್ದ, ಬೆಳಕು, ದೂಳು ಆವರಿಸಿದೆ. ಯಾವ ಮನೆಗಳೂ ದೊಡ್ಡಮಟ್ಟದ ಹಾನಿಯಾಗಿಲ್ಲ.ಲ್ಲಿನ ವಿದ್ಯುತ್ ಕಂಬಗಳು ಧರೆಗೆ ಉರುಳಿಲ್ಲ. ಸ್ಫೋಟದ ಅಕ್ಕಪಕ್ಕದಲ್ಲಿದ್ದ ವಾಹನಗಳು, ಕ್ರಷರ್ ಯಂತ್ರಗಳು, ಅವುಗಳಿಗೆ ಹಾಕಿರುವ ತಡೆಗೋಡೆಗಲೂ ಸುರಕ್ಷಿತವಾಗಿವೆ. ಆದರೆ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿರುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ ಅಲ್ಲಿನ ನಿವಾಸಿ ಸೋಮ್ಲಾನಾಯ್ಕ.

‘ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಗಿರುವ ಶಬ್ದ, ನೂರಾರು ಮನೆಗಳ ಕಿಟಕಿ ಗಾಜು, ಗೋಡೆಗಳು, ಆರ್‌ಸಿಸಿ ಕಳಚಿರುವುದು ಸ್ಫೋಟದಿಂದ ಆಗಿರಲು ಸಾಧ್ಯವಿಲ್ಲ. ತಜ್ಞರು ವರದಿ ನೀಡಿದ ಬಳಿಕ ವಾಸ್ತವಾಂಶ ತಿಳಿಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಇವನ್ನೂ ಓದಿ...


 

ಹುಣಸೋಡು ಸ್ಫೋಟ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಯಡಿಯೂರಪ್ಪ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು