ಭಾನುವಾರ, ಮೇ 9, 2021
25 °C

ಶಿವಮೊಗ್ಗ | ಶಿಕ್ಷಕರ ವರ್ಗಾವಣೆ ಕರಡು ನಿಯಮಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಶಿಕ್ಷಕರ ವರ್ಗಾವಣೆ ಕರಡು ನಿಯಮ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸರ್ಕಾರ ಶಿಕ್ಷಕರಿಗೆ ನಿಯಮ ರೂಪಿಸುವುದಕ್ಕಿಂತ ಮುಂಚಿತವಾಗಿ ಶಿಕ್ಷಣ ತಜ್ಞರ ಜತೆ ಸಮಾಲೋಚನೆ ಮಾಡಬೇಕಿತ್ತು. ಶಿಕ್ಷಕರಿಗೆ ಅನುಕೂಲವಾದ ನಿಯಮಗಳನ್ನು ರೂಪಿಸದೇ ಶಿಕ್ಷಣ ಸ್ನೇಹಿ ಹೆಸರಿನಲ್ಲಿ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಸ್ಪರ ವರ್ಗಾವಣೆಯಲ್ಲಿನ ಅವಕಾಶಕ್ಕೂ ಇಲಾಖೆ ಕತ್ತರಿ ಪ್ರಯೋಗ ಮಾಡಿದೆ. ಶಿಕ್ಷಕರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಪರಸ್ಪರ ವರ್ಗಾವಣೆಯಿಂದ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶೈಕ್ಷಣಿಕ ಪ್ರಗತಿ, ಶಾಲಾ ಫಲಿತಾಂಶಕ್ಕೆ ತೊಂದರೆಯಾಗುವುದಿಲ್ಲ. ಹಣದ ಆಮಿಷ ಇರುತ್ತದೆ ಎಂಬ ತಪ್ಪು ತಿಳಿವಳಿಕೆ ಇದೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಶಿಕ್ಷಕ ಸಮುದಾಯಕ್ಕೆ ತೊಂದರೆಯಾಗುವ ನಿಯಮ ರೂಪಿಸುವುದು ಸರಿಯಲ್ಲ. ಪರಸ್ಪರ ವರ್ಗಾವಣೆ ಒಮ್ಮೆ ಮಾತ್ರ ಎಂಬ ನಿಯಮಕ್ಕೆ ತಿದ್ದುಪಡಿ ತರಬೇಕು. ಮುಕ್ತ ಅವಕಾಶ ಕೊಡಬೇಕು ಎಂದು ದೂರಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಹರೀಶ್, ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್‌ಕುಮಾರ್, ಎಸ್.ಬಿ.ಶಿವಕುಮಾರ್, ನಾಗರಾಜ್, ಪ್ರೀತಮ್, ತ್ಯಾಗರಾಜ್, ಪರಶುರಾಮ, ಎಸ್.ಹೇಮಂತ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು