ಶಿವಮೊಗ್ಗ: ನಿಯಮಉಲ್ಲಂಘಿಸುವ ಮರಳು ಕ್ವಾರಿಗುತ್ತಿಗೆದಾರರವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರವಾನಗಿರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ಎ ಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮರಳು ಕ್ವಾರಿಗಳ ನಿರ್ವಹಣೆ,ಗಣಿಗಾರಿಕೆ ಪುನರಾರಂಭ ಕುರಿತುಆಯೋಜಿಸಲಾಗಿದ್ದಮರಳು ಸಮಿತಿ ಸಭೆಯಲ್ಲಿ ಅವರುಮಾತನಾಡಿದರು.

ಮರಳು ಕ್ವಾರಿಗಳ ಸಂಪರ್ಕ ರಸ್ತೆದುರಸ್ತಿ ಮಾಡಬೇಕು. ಎಲ್ಲಕ್ವಾರಿಗಳಲ್ಲೂ ಸಿ.ಸಿ.ಟಿ.ವಿ. ಕ್ಯಾಮರಾ ಅಳವಡಿಸಬೇಕು.ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ತಪಾಸಣಾ ಕೇಂದ್ರಗಳಲ್ಲಿ ಇಲಾಖೆಯ ಸಿಬ್ಬಂದಿನಿಯೋಜಿಸಬೇಕು. ಕ್ವಾರಿ ಮತ್ತು ತಪಾಸಣಾ ಕೇಂದ್ರಗಳ ಸಿ.ಸಿ.ಟಿ.ವಿ ಕ್ಯಾಮೆರಾಗಳ ಚಿತ್ರಿತ ದಾಖಲೆಗಳನ್ನು ವಾರಕ್ಕೆ ಒಮ್ಮೆಸಮೀಪದ ಪೊಲೀಸ್ ಠಾಣೆಗೆ ತಲುಪಿಸಬೇಕು ಎಂದುಸೂಚಿಸಿದರು.

ಉಪ ವಿಭಾಗಾಧಿಕಾರಿಗಳು ತಹಶೀಲ್ದಾರ್ ಒಳಗೊಂಡ ತಾಲ್ಲೂಕುಮಟ್ಟದ ಸಮಿತಿಗಳನ್ನು ರಚಿಸಬೇಕು.ಪ್ರತಿತಿಂಗಳುಸಭೆನಡೆಸಬೇಕು.ಮರಳು ವಿತರಣೆಕುರಿತುಸಮಾಲೋಚನೆ ನಡೆಸಬೇಕು. ಪರವಾನಗಿಅವಧಿ ಪೂರ್ಣಗೊಂಡಿರುವ ಕ್ವಾರಿಗಳಮರು ಟೆಂಡರ್ ಕರೆಯಬೇಕು.ತೀರ್ಥಹಳ್ಳಿಯ ಸಿಬ್ಬಲುಗುಡ್ಡೆ ಕ್ವಾರಿಗೆಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ಭೇಟಿ ನೀಡಿ ಪರಿಶೀಲಿಸಬೇಕು.ವರದಿ ನೀಡಿದ ನಂತರ ಕ್ವಾರಿ ಆರಂಭಿಸುವಕುರಿತು ಪರಿಶೀಲಿಸಲಾಗುವುದು ಎಂದರು.

ಶಿವಮೊಗ್ಗ ತಾಲ್ಲೂಕಿನ ಕೂಡ್ಲಿಯ ಮರಳು ಕ್ವಾರಿ ರದ್ದುಪಡಿಸುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ. ಉಪ ವಿಭಾಗಾಧಿಕಾರಿ ಸ್ಥಳ ಪರಿಶೀಲನೆ ನಡೆಸಬೇಕು. ಮರಳು ಸಾಗಣೆ ಮಾಡುವ ಲಾರಿಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್. ಅಳವಡಿಸಬೇಕು. ಅಕ್ರಮವಾಗಿ ಮರಳು ಸಾಗಿಸುವ ಟ್ರ್ಯಾಕ್ಟರ್ ಮತ್ತು ಲಾರಿಗಳಿಗೆ ಮರಳಿನ ಮೌಲ್ಯದ ಐದು ಪಟ್ಟು ಹೆಚ್ಚುದಂಡ ವಿಧಿಸಬೇಕು. ಮೊಕದ್ದಮೆ ದಾಖಲಿಸಬೇಕು ಎಂದು ತಾಕೀತು ಮಾಡಿದರು.

ಪ್ರಸ್ತುತ ಸರ್ಕಾರದ ಕಟ್ಟಡ ನಿರ್ಮಾಣ,ದುರಸ್ತಿಗೆ ಪ್ರತ್ಯೇಕ ಕ್ವಾರಿ ಗುರುತಿಸಲಾಗಿದೆ. ಅಲ್ಲಿಂದಲೇಮರಳು ಪಡೆಯಲು ಸೂಚಿಸಲಾಗಿದೆ. ಯಾವುದೇ ಕಟ್ಟಡ ನಿರ್ಮಾಣಕ್ಕೆ ಮರಳಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರರು ಸಬೂಬು ಹೇಳಬಾರದು.ಮರಳು ಸಾಗಿಸುವವರು ಸಂಗ್ರಹಣಾ ಸ್ಥಳ, ರಸ್ತೆ ಮಾರ್ಗ, ಪರವಾನಗಿದಿನ,ಸಮಯ ಹಾಗೂ ಕ್ವಾರಿಯಲ್ಲಿ ಸಿ.ಸಿ.ಟಿ.ವಿ. ಕ್ಯಾಮರಾ ಅಳವಡಿಕೆದಾಖಲೆಗಳನ್ನು ಹೊಂದಿರಬೇಕು ಎಂದರು.

ಜಿಲ್ಲಾ ಪಂಚಾಯಿತಿಸಿಇಒಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ನಾಗರಾಜ್, ಹಿರಿಯ ಭೂವಿಜ್ಞಾನಿ ರಶ್ಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.