ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸನಗರ: ಮಾರಿಕಾಂಬಾ ದೇವಿ ಜಾತ್ರೆ ನಾಳೆಯಿಂದ

ತವರುಮನೆಯಲ್ಲಿ ವಿಶೇಷ ಪೂಜೆ. ಅದ್ದೂರಿಯ ಮಹೋತ್ಸವ
Published 5 ಫೆಬ್ರುವರಿ 2024, 14:53 IST
Last Updated 5 ಫೆಬ್ರುವರಿ 2024, 14:53 IST
ಅಕ್ಷರ ಗಾತ್ರ

ಹೊಸನಗರ: ಪಟ್ಟಣದ ನಗರ ದೇವತೆ ಮಾರಿಕಾಂಬಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಫೆಬ್ರುವರಿ 6ರಿಂದ ಆರಂಭವಾಗಲಿದ್ದು, 14ರವರೆಗೆ ನಡೆಯಲಿದೆ.

ಮಂಗಳವಾರ ಬೆಳಿಗ್ಗೆ ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಮಾರಿಕಾಂಬಾ ದೇವಿಯನ್ನು ಮೆರವಣಿಗೆ ಮೂಲಕ  ತವರುಮನೆಯಾದ ಹಳೇ ಸಾಗರ ರಸ್ತೆ ದುರ್ಗಾಂಬಾ ದೇವಸ್ಥಾನದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಫೆ. 7ರಂದು ಮಾರಿಗುಡ್ಡದಲ್ಲಿನ ಮಾರಿಕಾಂಬಾ ದೇವಿ ಗದ್ದಿಗೆಯಲ್ಲಿನ ದೇವಸ್ಥಾನ ಆವರಣದಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಬಳಿಕ ವಿವಿಧ ‌‌ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಾರಿಗುಡ್ಡದ ಆವರಣದಲ್ಲಿ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ.

ಮಾರಿಗುಡ್ಡದಲ್ಲಿ 8 ದಿನಗಳ ಕಾಲ ಮಹೋತ್ಸವ ನಡೆಯಲಿದೆ. ಪ್ರತಿ ದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಹಾಗೂ ಸ್ಪರ್ಧೆಗಳು ‌‌‌‌ನಡೆಯಲಿವೆ ಎಂದು ಜಾತ್ರಾ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT