ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾತ್ಸಲ್ಯ ತೋರಿಸುವ ಹೆಣ್ಣನ್ನು ಗೌರವಿಸಿ: ಡಾ.ಮಹಾಂತ ಸ್ವಾಮೀಜಿ

Published 10 ಮಾರ್ಚ್ 2024, 15:54 IST
Last Updated 10 ಮಾರ್ಚ್ 2024, 15:54 IST
ಅಕ್ಷರ ಗಾತ್ರ

ಸೊರಬ: ಜಗತ್ತಿನಲ್ಲಿ ತಾಯಿಗೆ ಪವಿತ್ರವಾದ ಸ್ಥಾನವಿದ್ದು, ತನ್ನ ವಾತ್ಸಲ್ಯದಿಂದ ಎಲ್ಲರನ್ನೂ ಗೆಲ್ಲುವ ಹೆಣ್ಣನ್ನು ಪೂಜಿಸುವ ಸಂಸ್ಕೃತಿಯನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಅವಳಿಗೆ ಸಲ್ಲಿಸುವ ಗೌರವ ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುಘಾ ಮಠದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ 'ವಿಶ್ವ ಮಹಿಳಾ ದಿನಾಚರಣೆ 'ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅವರು ಮಾತನಾಡಿದರು. ಹೆಣ್ಣು ಸಂಸ್ಕಾರದ ಪ್ರತೀಕವಾಗಿದ್ದು, ಎಲ್ಲವನ್ನೂ ಪೊರೆಯುವ ಅಗಾಧ ಶಕ್ತಿಯಾಗಿದ್ದಾಳೆ. ಈ ನಾಡನ್ನು ಸಂಸ್ಕಾರಯುತ ನಾಡನ್ನಾಗಿ ಕಟ್ಟುವ ಶಕ್ತಿ ಮಹಿಳೆಗಿದೆ ಎಂದ ಅವರು, ಕನ್ನಡ ನಾಡನ್ನಾಳಿದ ಕೆಳದಿ ಚೆನ್ನಮ್ಮ,ಬೆಳವಡಿ ಮಲ್ಲಮ್ಮ,ರಾಣಿ ಅಬ್ಬಕ್ಕರು ಸ್ವಾತಂತ್ರ್ಯ ತರುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ಪುರುಷರಿಗೆ ಸಮಾನವಾಗಿ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಸ್ಮರಣೀಯ ಸಾಧನೆ ಮಾಡಿದ್ದಾಳೆ. ಸದೃಢ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದ್ದು, ಎಲ್ಲಿ ಮಹಿಳೆಯರನ್ನು ಗೌರವಿಸುತ್ತೇವೇಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಹೆಣ್ಣು ಸುಖ ಶಾಂತಿ ನೆಮ್ಮದಿಯಿಂದ ಇದ್ದರೆ ಅ ಮನೆ ಶಾಂತಿಯ ಧಾಮವಾಗುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.

ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಬವಿದ್ಯಾ ಚೇತನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೌಭಾಗ್ಯ,ಪಿಎಸ್ಐ ನಾಗರಾಜ್,ವಿಜಯ್ ಕುಮಾರ್ ದಟ್ಟೇರ್, ರಾಜು ಹಿರಿಯಾವಲಿ, ಧರ್ಮಸ್ಥಳ ಸಂಘ ಯೋಜನಾ ಧಿಕಾರಿ ಸುಬ್ರಾಯ್ ನಾಯ್ಕ್, ಮಂಜುನಾಥ್, ಸುಪ್ರಿಯಾ,ಪವಿತ್ರಾ ರಾಯ್ಕರ್, ಲಕ್ಷ್ಮಿ ಮುರಳೀಧರ,ಉಷಾ ಎಂ.ಬಿ,ಜೋತಿರ್ಮಾಲ.ಚರಿತಾ ಕಾರ್ತಿಕ್,ಪಾಣಿ ರಾಜಪ್ಪ , ರೂಪದರ್ಶಿನಿ, ಮಹೇಶ್ ಖಾರ್ವಿ, ಶಿಕ್ಷಕರಾದ ಸದಾನಂದ, ಸಂಪತ್ ಕುಮಾರ್ , ಉಮೇಶ್ ಭದ್ರಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT