ಆನವಟ್ಟಿ: ಸಮೀಪದ ಜಡೆ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮಹೇಶ್ ಎಚ್. ಕುಂಟು ನೆಪ ಹೇಳಿ ಪರೀಕ್ಷೆಯಿಂದ ಗೈರಾಗುತ್ತಿದ್ದ. ಸುರಿಯುವ ಮಳೆಯಲ್ಲೇ ಶಿಕ್ಷಕರು ಆತನನ್ನು ಹುಡುಕಿ ಕರೆತಂದರು.

ಪರೀಕ್ಷಾ ಭಯದಿಂದಾಗಿ ತನ್ನ ಆರೋಗ್ಯ ಸರಿ ಇಲ್ಲ ಎಂದು ಕುಂಟು ನೆಪ ಹೇಳಿ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿದ್ದ. ಜಡೆ ಆಸ್ಪತ್ರೆಗೆ ಹೋಗುವುದಾಗಿ, ನಂತರ ಆನವಟ್ಟಿ ಆಸ್ಪತ್ರೆ ಹೋಗುತ್ತೇನೆ ಎಂದು ತಿಳಿಸಿದ್ದ. ಬಳಿಕ ಪರೀಕ್ಷೆಗೆ ಬಾರದೆ ಅಲೆದಾಡುತ್ತಿದ್ದನು.

ವಿಷಯ ತಿಳಿದ ಶಿಕ್ಷಕರಾದ ಶಂಕರ ಗೌಡ ಹಾಗೂ ಮನೋಜ್ ಕುಮಾರ್ ಸುರಿಯುವ ಮಳೆಯಲ್ಲೇ ಜಡೆ, ಆನವಟ್ಟಿ ಆಸ್ಪತ್ರೆ ಸೇರಿ ಇತರೆಡೆ ಬೈಕ್‍ನಲ್ಲಿ ಹುಡುಕಿದ್ದಾರೆ. ಅಂತಿಮವಾಗಿ ಮಂಗಾಪುರ ರಸ್ತೆ ಮಧ್ಯೆ ಸಿಕ್ಕ ವಿದ್ಯಾರ್ಥಿಯನ್ನು ಶಾಲೆಗೆ ಕರೆತಂದು ಪರೀಕ್ಷೆ ಬರೆಯಲು ಕೂರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.