ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರು: ವಿದ್ಯಾರ್ಥಿ ಆತ್ಮಹತ್ಯೆ

Published 17 ಮಾರ್ಚ್ 2024, 16:00 IST
Last Updated 17 ಮಾರ್ಚ್ 2024, 16:00 IST
ಅಕ್ಷರ ಗಾತ್ರ

ಸವಣೂರು: ತಾಲ್ಲೂಕಿನ ಕುರುಬರಮಲ್ಲೂರ ಗ್ರಾಮದ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಶಾಂತ ಪ್ರಕಾಶ ಕಳಸೂರ (18) ಮೃತರು. ಯುವತಿಯನ್ನು ಕರೆದುಕೊಂಡು ಹೋದ ಆರೋಪ ಹೊರಿಸಿ, ಆತನ ಪಾಲಕರಿಂದ ಹಣ ವಸೂಲಿ ಮಾಡಿದ್ದಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಹಾವೇರಿಯ ಚಂದ್ರಶೇಖರ ಮುದಕಣ್ಣನವರ, ಮಾದೇವಪ್ಪ ಮೂಡಣ್ಣನವರ, ಕಲ್ಲಪ್ಪ ಮೂಡಣ್ಣನವರ, ಚೈತ್ರಾ ಮೂಡಣ್ಣನವರ ಎಂಬುವವರ ವಿರುದ್ಧ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಘಟನೆ ಹಿನ್ನೆಲೆ: ಪ್ರಶಾಂತನ ತಂದೆ ಪ್ರಕಾಶ ಕಳಸೂರ ಅವರಿಗೆ ಆರೋಪಿಗಳು ಕರೆ ಮಾಡಿ, ‘ನಿಮ್ಮ ಮಗ ಯುವತಿಯೊಬ್ಬಳ ಜೊತೆ ಹೋಗಿದ್ದು, ಅವರೀಗ ನಮ್ಮ ಬಳಿ ಇದ್ದಾರೆ’ ಎಂದು ಕರೆಸಿಕೊಂಡು,  ‘₹5 ಲಕ್ಷ ನೀಡದಿದ್ದರೆ ನಿಮ್ಮ ಮಗನನ್ನು ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ಪ್ರಕಾಶ ಅವರು ₹3 ಲಕ್ಷ ನೀಡಲು ಒಪ್ಪಿಕೊಂಡಿದ್ದರು. ಕಳಸೂರು ಗ್ರಾಮದ ಅಜ್ಜನ ಮನೆಯಲ್ಲಿದ್ದ ಪ್ರಶಾಂತ ಈ ವಿಷಯ ತಿಳಿದು ಮಾರ್ಚ್‌ 12ರಂದು ವಿಷ ಸೇವಿಸಿದ್ದ. ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT