ಸೋಮವಾರ, ಡಿಸೆಂಬರ್ 6, 2021
23 °C

ಟಿ.ಎಸ್‌.ರುದ್ರೇಶಪ್ಪ ಆದಾಯ ಶೇ 400ರಷ್ಟು ಅಧಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ ಅವರ ಒಟ್ಟು ಆಸ್ತಿ ₹ 6.65 ಕೋಟಿ. ಇದು ಅವರ ಆದಾಯದ ಶೇ 400ರಷ್ಟು ಅಧಿಕ ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದ ಚಾಲುಕ್ಯ ನಗರ ಹಾಗೂ ಗೋಪಾಳದ ಅವರ ಮನೆಗಳ ಮೇಲೆ ಗುರುವಾರ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು 9.4 ಕೆ.ಜಿ. ಚಿನ್ನಾಭರಣ ಹಾಗೂ ಚಿನ್ನದ ಬಿಸ್ಕತ್‌, 3 ಕೆ.ಜಿ. ಬೆಳ್ಳಿ, 4 ನಿವೇಶನಗಳು,  ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ತಣಿಗೆರೆಯಲ್ಲಿ 8 ಎಕರೆ ಕೃಷಿ ಭೂಮಿ,  ₹ 15.94 ಲಕ್ಷ ನಗದು,  ₹ 20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, 2 ಕಾರು  3 ದ್ವಿಚಕ್ರ ವಾಹನಗಳನ್ನು ಪಟ್ಟಿ ಮಾಡಿದ್ದರು.

ಖಾಲಿ ಲಾಕರ್‌:

ನಗರದ ಎಸ್‌ಬಿಐ ಬ್ಯಾಂಕ್‌ಗೆ ಶುಕ್ರವಾರ ರುದ್ರೇಶಪ್ಪ ಅವರನ್ನು ಕರೆತಂದ ಅಧಿಕಾರಿಗಳು ಲಾಕರ್‌ಗಳನ್ನು ಪರಿಶೀಲಿಸಿದರು. ಆದರೆ, ಲಾಕರ್‌ನಲ್ಲಿ ಯಾವುದೇ ಹಣ, ಒಡವೆ, ದಾಖಲೆಗಳು ಇರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು