ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಸಂಸ್ಥೆಗಳು ಸೇವಾ ಮನೋಭಾವ ಹೊಂದಿರಲಿ: ಶಾಸಕಿ ಶಾರದಾ ಪೂರ್ಯಾನಾಯ್ಕ್

Published 7 ಆಗಸ್ಟ್ 2023, 14:09 IST
Last Updated 7 ಆಗಸ್ಟ್ 2023, 14:09 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಮಹಿಳೆಯರು ಆರ್ಥಿಕವಾಗಿ ಹೆಚ್ಚು ಸಬಲರಾಗಲು ಸ್ವ ಉದ್ಯೋಗದ ಅವಶ್ಯಕತೆ ಇದೆ ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ್ ತಿಳಿಸಿದರು.

ಸಮೀಪದ ಅರಹತೊಳಲು ಗ್ರಾಮದಲ್ಲಿ ಮಲ್ನಾಡ್ ಸಮಾಜ ಸೇವಾ ಸಂಸ್ಥೆ ವತಿಯಿಂದ ನಡೆದ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ತರಬೇತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಆಧುನಿಕ ಸಮಾಜದಲ್ಲಿ ಸಂಸಾರದ ಜವಾಬ್ದಾರಿ ಹೊತ್ತ ಹೆಣ್ಣು ಕುಟುಂಬ ನಿರ್ವಹಣೆಗೆ ಯಾವುದಾದರೂ ಒಂದು ಉಪಕಸುಬನ್ನು ಹೊಂದಿರಲೇಬೇಕು. ಟೈಲರಿಂಗ್, ಊದುಬತ್ತಿ ತಯಾರಿಕೆ, ಮೇಣದ ಬತ್ತಿ ತಯಾರಿಕೆ, ಹಪ್ಪಳ, ಸಂಡಿಗೆ ತಯಾರಿಕೆ, ಬ್ಯೂಟಿ ಪಾರ್ಲರ್ ಸೇರಿದಂತೆ ಹಲವಾರು ಆಯ್ಕೆಗಳಿವೆ. ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸಲು ತರಬೇತಿ ಅತಿ ಮುಖ್ಯ. ಇಂತಹ ತರಬೇತಿಯನ್ನು ನೀಡುತ್ತಿರುವ ಸಂಸ್ಥೆಗಳ ಸೇವೆ ಅಭಿನಂದನೀಯ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಮಹಿಳಾ ಅಧ್ಯಕ್ಷೆ ಗೀತಾ ಸತೀಶ್, ಜೆಡಿಎಸ್ ಗ್ರಾಮಾಂತರ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಜೆ.ಎನ್.ಪರಶುರಾಮ್ ರಾವ್, ಗ್ರಾಮ ಪಂಚಾಯಿತಿ ಅದ್ಯಕ್ಷೆ ನಾಗಮ್ಮ, ಪಿಡಿಒ ವೆಂಕಟೇಶ್ ಮೂರ್ತಿ, ಮಲ್ನಾಡ್ ಸಮಾಜ ಸೇವಾ ಸಂಸ್ಥೆಯ ಫಾದರ್ ಅಬ್ರಹಾಂ, ಸಿಸ್ಟರ್ ಸುಪ್ರಿಯಾ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ರಾಜಪ್ಪ, ಆಶಾ, ಜೆಡಿಎಸ್ ಮುಖಂಡರಾದ ಡಿ.ಎಚ್.ಫಾಲಾಕ್ಷಪ್ಪ, ಕೆ.ಬಿ.ಮಹೇಶ್, ಜಿ.ಎಸ್.ಶಿವಕುಮಾರ್ ಪಾಟೀಲ್, ಶಕುಂತಲಾ ಹಾಲೇಶಪ್ಪ, ಕೆ.ಆರ್.ಸತೀಶ್, ಎಂ.ಹನುಮಂತಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT