ಬುಧವಾರ, ಫೆಬ್ರವರಿ 1, 2023
16 °C
ಸಂವಾದದಲ್ಲಿ ರೈತ ಮುಖಂಡ ಕೆ.ಟಿ.ಗಂಗಾಧರ್

ಪ್ರಭುತ್ವ ತಿದ್ದುವುದು ರೈತ ಚಳವಳಿ ಉದ್ದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರೈತ ಚಳವಳಿಗಳ ಉದ್ದೇಶ ಪ್ರಭುತ್ವವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವುದು ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ಹೇಳಿದರು.

ಇಲ್ಲಿನ ಕಮಲಾ ನೆಹರೂ ಕಾಲೇಜಿನಲ್ಲಿ ಬಹುಮುಖಿಯಿಂದ ನಡೆದ ‘ಜಾಗತೀಕರಣ ಹಾಗೂ ಕೃಷಿ ಬಿಕ್ಕಟ್ಟುಗಳು’ ಎಂಬ ವಿಷಯವಾಗಿ ಅವರು ಮಾತನಾಡಿದರು.

ದೇಶದಲ್ಲಿ ಇಂದು ಹೆಚ್ಚು ಆಹಾರ ಉತ್ಪಾದನೆ ಮಾಡಲಾಗುತ್ತದೆ. ಅದಕ್ಕೆ ಕಾರಣವೇನೆಂದರೆ ಹೈಬ್ರಿಡ್ ತಳಿಗಳು, ನೀರಾವರಿ ಯೋಜನೆ, ಬ್ಯಾಂಕ್‌ಗಳ ಸಾಲ. ಇದರಿಂದ ಬಹಳ ಅನುಕೂಲವಾಯಿತು. ಆದರೆ, ಸರ್ಕಾರದ ನೀತಿಯಿಂದಾಗಿ ರೈತರು ಪರಾವಲಂಬಿಗಳಾದರು. ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳತೊಡಗಿದರು. ಸರ್ಕಾರ ರೈತಪರ ನೀತಿ ಅನುಸರಿಸದೇ ಉದ್ದಿಮೆಗಳ ಪರವಾಗಿದೆ ಎಂದರು.

ಎಪಿಎಂಸಿ ವ್ಯವಸ್ಥೆ ರದ್ದುಮಾಡಿ ಖಾಸಗಿ ಮಾರುಕಟ್ಟೆ ಮುನ್ನೆಲೆಗೆ ತಂದಿರುವುದು ದೇಶದ ಕೃಷಿ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ರೈತ ಭೂಮಿಯಿಂದ ದೂರ ಹೋದರೆ ಕ್ರಮೇಣ ಕೃಷಿ ಜ್ಞಾನ ಕಡಿಮೆಯಾಗುತ್ತದೆ. ಇದರಿಂದ ಕೃಷಿಯಲ್ಲಿ ಔಷಧ, ಕ್ರಿಮಿನಾಶಕ ಹೆಚ್ಚು ಉಪಯೋಗಿಸಿ ಆಹಾರ ವಿಷಪೂರಿತ ಆಗಿ ರಫ್ತು ನಿಲ್ಲುತ್ತದೆ. ಉತ್ಪಾದನೆ ಜಾಸ್ತಿ ಆಗಿ ಮಾರಾಟವಾಗದೆ ಆಹಾರ ಹಾಳಾಗುತ್ತದೆ. ಮನುಷ್ಯರ ವಂಶವಾಹಿನಿಗೂ ಆಹಾರಕ್ಕೂ ಸಂಬಂಧ ಇರುವುದರಿಂದ ಮುಂದೆ ಆರೋಗ್ಯ
ವಂತ ಮಕ್ಕಳು ಹುಟ್ಟುವುದು ಕಷ್ಟ ಎಂದರು.

ಇಂದು ಕೃಷಿ ಬಂಡವಾಳಶಾಹಿಗಳ ಪಾಲಾಗಿದೆ. ಸಾವಯವ ಪದ್ಧತಿ ಕೈಬಿಟ್ಟು ರೈತರು ಕ್ರಿಮಿನಾಶಕಗಳು, ಕೃತಕ ಗೊಬ್ಬರ ಉಪಯೋಗಿಸಿ ಭೂಮಿಯನ್ನು ಹಾಳು ಮಾಡಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಎಂ.ಡಿ.ಅಣ್ಣಯ್ಯನಾಯಕ್ ಹೇಳಿದರು.

ಡಾ.ಕೆ.ಜಿ.ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.