ಶುಕ್ರವಾರ, ಮೇ 7, 2021
25 °C

ನೀರಿಗಾಗಿ ಪಟ್ಟಣಕ್ಕೆ ಬಂದ ಜಿಂಕೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನವಟ್ಟಿ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಹಿಂದಿನ ಆವರಣದಲ್ಲಿ ನೀರು ಕುಡಿಯಲು ಬಂದ ಜಿಂಕೆಯೊಂದು ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ, ಕಾಡಿಗೆ ಬಿಡುವ ಸಂದರ್ಭದಲ್ಲಿ ಮೃತಪಟ್ಟಿದೆ.

‘ಜಿಂಕೆ ಹೃದಯಾಘಾತದಿಂದ ಮೃತಪಟ್ಟಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಮಾರ್ಚ್ ತಿಂಗಳು ಪ್ರಾರಂಭವಾಗುತ್ತಿದಂತೆ ಕಾಡಿನಲ್ಲಿರುವ ಕೆರೆಗಳ ನೀರು ಖಾಲಿಯಾಗಿ, ಕಾಡು ಪ್ರಾಣಿಗಳು ನೀರಿಗಾಗಿ ಊರಿಗೆ ಬರುತ್ತವೆ. ಹೀಗೆ ಬಂದ ಜಿಂಕೆಯನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ಆಗ ಅದು ಕೆಸರಿನಲ್ಲಿ ಸಿಲುಕಿಕೊಂಡಿದೆ. ಜಿಂಕೆ ಬಹಳ ಬೇಗ ಗಾಬರಿಗೊಳ್ಳುತ್ತದೆ ಮತ್ತು ಹೃದಯಾಘಾತಕ್ಕೆ ಒಳಗಾಗುವ ಪ್ರಾಣಿಯಾಗಿದೆ. ನಾಯಿಗಳು ಅಟ್ಟಿಸಿಕೊಂಡ ಬಂದಿದ್ದರಿಂದ ಗಾಬರಿಗೊಂಡಿತ್ತು. ಚಿಕಿತ್ಸೆ ನೀಡಿದರೂ ಸ್ಪಂದಿಸಲಿಲ್ಲ’ ಎಂದು ಆನವಟ್ಟಿಯ ಉಪ ಅರಣ್ಯ ಅಧಿಕಾರಿ ಜಾವಿದ್ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.