ಶಿವಮೊಗ್ಗ:ಕೊರೊನಾ ಸಂಕಷ್ಟದ ಸಮಯದಲ್ಲಿ ಅಸಂಘಟಿತ ಕಾರ್ಮಿಕರು ಕೆಲಸವಿಲ್ಲದೆಬೀದಿ ಪಾಲಾಗುವ ಪರಿಸ್ಥಿತಿ ಬಂದಿದೆ. ಅವರಿಗೆ ಸರ್ಕಾರದ ರಕ್ಷಣೆ, ನೆರವಿನ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಸರ್ಕಾರದ ಸೌಲಭ್ಯ ಪಡೆಯಲುಅಸಂಘಟಿತ ಕಾರ್ಮಿಕರು ಸಂಘಟಿತರಾಗಬೇಕಿದೆ. ಅದಕ್ಕಾಗಿ ಶಿವಮೊಗ್ಗ ಜಿಲ್ಲಾ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಸಂಘ ಜನ್ಮತಾಳಿದೆ.ಸಂಘದ ಸದಸ್ಯತ್ವ ಅಭಿಯಾನದ ಮೂಲಕ ಎಲ್ಲ ಅಸಂಘಟಿತರನ್ನೂ ಸಂಘಟಿಸಲಾಗುವುದು ಎಂದು ಸಂಘದ ಗೌರವಾಧ್ಯಕ್ಷರೂ ಆದ ಮಂಜುನಾಥ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸಂಘ ಜನ್ಮ ತಾಳಿದೆ. ಎಲ್ಲಾ ತಾಲ್ಲೂಕುಗಳಲ್ಲೂ ಸಮಿತಿ ರಚಿಸಲಾಗಿದೆ.
ಚಿಂದಿ ಆಯುವವರು, ಹಮಾಲಿಗಳು, ಟೈಲರ್ಗಳು, ಕ್ಷೌರಿಕರು, ಮೆಕ್ಯಾನಿಕ್ಗಳು, ಗೃಹ ಕಾರ್ಮಿಕರು, ಅಗಸರು, ಅಕ್ಕಸಾಲಿಗರು, ಕುಂಬಾರರು, ಕಂಬಾರರು, ಬುಟ್ಟಿ ಕಾರ್ಮಿಕರುಮತ್ತಿತರರಿಗೆಕಾರ್ಮಿಕ ಇಲಾಖೆಗುರುತಿನ ಚೀಟಿ ನೀಡಲಾಗಿದೆ. ಬ್ಯೂಟಿಪಾರ್ಲರ್, ಖಾಸಗಿ ಶಾಲೆಗಳು, ಹೋಟೆಲ್ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಹಾಗೂ ಖಾಸಗಿ ವಾಹನ ಚಾಲಕರು ಸೇರಿದಂತೆ ಇತರೆಡೆಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೂ ಕೂಡ ಗುರುತಿನ ಚೀಟಿ ನೀಡಲಾಗುವುದು ಎಂದರು.

ಅಸಂಘಟಿತ ಕಾರ್ಮಿಕಮಕ್ಕಳಿಗೆಲ್ಲರಿಗೂ ವಿಶೇಷ ವಿದ್ಯಾರ್ಥಿ ವೇತನ, ಅಸಂಘಟಿತ ಕಾರ್ಮಿಕರ ಕುಟುಂಬಗಳಿಗೆ ಉಚಿತ ವಿಮಾ ಸೌಲಭ್ಯ ಸೇರಿದಂತೆ ಆರೋಗ್ಯ ವಿಮಾ ಸೌಲಭ್ಯ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಗುರುತಿನ ಚೀಟಿ ಪಡೆದ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಸರ್ಕಾರ ₹5 ಲಕ್ಷ, ಅಂಗವಿಕಲರಾದರೆ ₹ 2 ಲಕ್ಷ, ಗಾಯಗೊಂಡವರಿಗೆ ಚಿಕಿತ್ಸೆಗಾಗಿ ₹50 ಸಾವಿರ ಪರಿಹಾರ ನೀಡುತ್ತಿದೆ. ಈ ಸೌಲಭ್ಯ ಪಡೆಯಲು ಅಸಂಘಟಿತ ಕಾರ್ಮಿಕರು ಸಂಘದ ಸದಸ್ಯತ್ವ ಪಡೆಯಬೇಕು ಎಂದು ಮನವಿ ಮಾಡಿದರು.

ಸೆ.17ರಂದು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಸಂಘದಿಂದ ಕಾರ್ಮಿಕರ ದಿನಾಚರಣೆ ಆಚರಿಸಲಾಗುವುದು.ಜಿಲ್ಲೆಯಲ್ಲಿ1 ಲಕ್ಷ ಸದಸ್ಯತ್ವನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕುಪೇಂದ್ರ ಆಯನೂರು, ಪ್ರದಾನ ಕಾರ್ಯದರ್ಶಿ ಮೇಘ ಮೋಹನ್ ಜೆಟ್ಟಿ, ರಾಜೇಂದ್ರ ಕುಮಾರ್, ಎಂ.ಮಂಜುನಾಥ್, ವಿಜಯಲಕ್ಷ್ಮಿ,ಗೌರಮ್ಮ, ಉಲ್ಲಾಸ್, ಪ್ರದೀಪ್ ಮಠದ್ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.