ಓದಿದ್ದು ಎಂಜಿನಿಯರಿಂಗ್ ಯುಪಿಎಸ್ಸಿಗೆ ಕನ್ನಡ ಸಾಹಿತ್ಯ!
ಬಿ.ನಿಖಿಲ್ ಮೂಲತಃ ಚಿತ್ರದುರ್ಗದವರು. 2017ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದಾರೆ. ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡಿದ್ದನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡರು. ಈ ಮೊದಲು ಭಟ್ಕಳದಲ್ಲಿ ಎಎಸ್ಪಿಯಾಗಿ ಎಎನ್‌ಎಫ್‌ನಲ್ಲಿ ಎಸ್ಪಿ ಆಗಿ ರಾಯಚೂರು ಕೋಲಾರದಲ್ಲಿ ಎಸ್ಪಿ ಆಗಿ ಕೆಲಸ ಮಾಡಿದ್ದಾರೆ.