‘ರಾಜ್ಯದಲ್ಲಿಯೇ ದೊಡ್ಡ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮ ಇದಾಗಿದ್ದು, ಸುಮಾರು ಆರು ನಿಮಿಷಗಳ ಅವಧಿಯಲ್ಲಿ ಹಾಡನ್ನು ಪ್ರಸ್ತುತ ಪಡಿಸಲಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರು ಇದುವರೆಗೂ ಬೆಳೆದು ಬಂದ ರೀತಿ, ಅವರ ಅಭಿವೃದ್ಧಿ ಕಾರ್ಯಗಳು, ಮಾನವೀಯತೆ, ಹೋರಾಟ ಹೀಗೆ ಅವರ ಸಮಗ್ರ ಚಿತ್ರಣ ಈ ಆರು ನಿಮಿಷದ ಹಾಡಿನಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇವೆ. ಹಾಗಾಗಿ ಇಡೀ ಕಾರ್ಯಕ್ರಮದಲ್ಲಿ ಈ ಹಾಡು ಹೈಲೈಟ್ ಆಗಲಿದೆ. 75ಕ್ಕೂ ಹೆಚ್ಚು ಕಲಾವಿದರು ಈ ದಿನವೇ ಶಿವಮೊಗ್ಗಕ್ಕೆ ಬಂದಿದ್ದು, ಪೂರ್ವ ತಯಾರಿ ಕೂಡ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.