ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ವರೆಗೆ ಉತ್ಪಾದನೆ ಬೇಡಿಕೆ ಪಡೆದ ವಿಐಎಸ್ಎಲ್

ವರ್ಷಾರಂಭದಲ್ಲಿ ಹಲವು ನಿರೀಕ್ಷೆ; ಭದ್ರಾವತಿ ಕಾರ್ಖಾನೆ ಆವರಣದಲ್ಲಿ ಗರಿಗೆದರಿದ ಚಟುವಟಿಕೆ
Last Updated 2 ಜನವರಿ 2022, 9:01 IST
ಅಕ್ಷರ ಗಾತ್ರ

ಭದ್ರಾವತಿ: ಕಾರ್ಖಾನೆ ನಗರದಲ್ಲಿ ಕಾರ್ಮಿಕರ ಸದ್ದು ಕ್ಷೀಣಿಸುತ್ತಿದ್ದರೂ ಇರುವ ಒಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆ ವಿಐಎಸ್ಎಲ್ ಹಲವು ಹೊಸ ನಿರೀಕ್ಷೆಯೊಂದಿಗೆ ತನ್ನ ಉತ್ಪಾದನೆ ನಡೆಸುತ್ತಿದೆ.

ಈ ಬಾರಿಯ ಕಳೆದ ಸಾಲಿನ ಕಡೆ ಮೂರು ತಿಂಗಳು ಉತ್ತಮ ಲಾಭದಲ್ಲಿ ಮುನ್ನಡೆದಿರುವ ಕಾರ್ಖಾನೆ ಸದ್ಯ ಮುಂದಿನ ಏಪ್ರಿಲ್ ಅಂತ್ಯದವರೆಗೆ ಉತ್ಪಾದನೆಯ ಆರ್ಡರ್ ಪಡೆದಿದೆ.

ಮತ್ತೊಂದೆಡೆ ಬಾರ್ ಮಿಲ್ ಸಹ ಆರಂಭದ ಸೂಚನೆ ಸಿಕ್ಕಿರುವುದು ಹೊಸವರ್ಷದ ಆರಂಭಕ್ಕೆ ಒಂದಿಷ್ಟು ಉತ್ಸುಕತೆ ತಂದಿದೆ. ಇದರಿಂದ ವಿಐಎಸ್ಎಲ್ ಆವರಣದಲ್ಲಿ ಹೊಸ ನೀರಿಕ್ಷೆ ಹೆಚ್ಚಿದೆ.

ಎಂಪಿಎಂ ಕಾರ್ಖಾನೆ ಉತ್ಪಾದನೆ ಸ್ಥಗಿತದ ಜತೆಗೆ ಕ್ಲೋಸರ್ ಆದೇಶ ಪಡೆದಿದ್ದರೂ ಅಲ್ಲಿನ ಕಾರ್ಮಿಕರಿಗೆ ಬೇರೆಡೆ ಕೆಲಸ ಕೊಡಿಸುವ ಪ್ರಯತ್ನಕ್ಕೆ ಒಂದಿಷ್ಟು ಯಶಸ್ಸು ಸಿಗುವ ಸಾಧ್ಯತೆ ಇದೆ. ಜತೆಗೆ ಎಂಪಿಎಂ ಕಾರ್ಖಾನೆಯನ್ನು ಯಾವುದಾದರೂ ರೂಪದಲ್ಲಿ ಆರಂಭಿಸುವ ಪ್ರಯತ್ನಗಳಿಗೆ ಮತ್ತಷ್ಟು ವೇಗ ಸಿಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ.

‘‘ಎಂಪಿಎಂ ಅರಣ್ಯವನ್ನು ವಶಕ್ಕೆ ಪಡೆದಿದ್ದ ಸರ್ಕಾರ ಮತ್ತೆ ಕಾರ್ಖಾನೆ ಆರಂಭಿಸುವ ಭರವಸೆ ನೀಡಿತ್ತು. ಎಂಪಿಎಂ ವಶಕ್ಕೆ ನೀಡುವ ಸಂಬಂಧ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ ಎಂಪಿಎಂ ಆರಂಭಿಸುವ ಪ್ರಕ್ರಿಯೆಗೆ ಸರ್ಕಾರ ಪ್ರಯತ್ನ ನಡೆಸಿದ್ದು, ಈ ವರ್ಷ ಅದು ಯಶಸ್ಸು ಕಂಡಲ್ಲಿ ಉದ್ಯೋಗದ ಅವಕಾಶ ಹೆಚ್ಚಾಗಲಿದೆ’ ಎಂಬ ವಿಶ್ವಾಸ ಕಾರ್ಮಿಕರದ್ದು.

ಆರ್ಥಿಕತೆ ವೃದ್ಧಿ: ಜಿಲ್ಲೆಯ ಏಕೈಕ ಕೈಗಾರಿಕಾ ನಗರವಾಗಿ ಉಳಿದಿರುವ ಇಲ್ಲಿನ ಎರಡು ಕಾರ್ಖಾನೆ ಪುನಶ್ಚೇತನ ಹಾದಿ ಶೀಘ್ರವಾದಲ್ಲಿ ಇಲ್ಲಿನ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆಎನ್ನುತ್ತಾರೆ ವ್ಯಾಪಾರಸ್ಥ ಸುಧೀರ್.

‘15 ವರ್ಷಗಳಿಂದ ಯುವಕರ ವಲಸೆ ಹೆಚ್ಚಿದೆ. ಇದಕ್ಕೆ ತಡೆಹಾಕಲು ಇಲ್ಲಿನ ಕೈಗಾರಿಕೆಗಳ ಉಳಿವಿನಿಂದ ಮಾತ್ರ ಸಾಧ್ಯ. ಇದಕ್ಕಾಗಿ ನಡೆದಿರುವ ಪ್ರಯತ್ನಕ್ಕೆ ಜನಪ್ರತಿನಿಧಿಗಳು ಮತ್ತಷ್ಟು ಒತ್ತು ನೀಡಲಿ ಎಂಬುದು ಎಲ್ಲರ ಒತ್ತಾಯ’ ಎನ್ನುತ್ತಾರೆ ವ್ಯಾಪಾರಿ ಮಧು.

‘ರಿಯಲ್ ಎಸ್ಟೇಟ್ ವ್ಯವಹಾರ ಹೆಚ್ಚುತ್ತಿದೆ. ಇದರಿಂದ ನಿವೇಶನ ಬೆಲೆಯಲ್ಲಿ ಹೆಚ್ಚಳ ಸಾಧಿಸಬಹುದೇ ಹೊರತು ಇದಕ್ಕೆ ಪೂರಕವಾಗಿ ಬೆಳೆಯಬೇಕಾದ ನಮ್ಮ ಎರಡು ಕಾರ್ಖಾನೆಗಳ ಉನ್ನತೀಕರಣ, ಆರಂಭದ ವೇಗ ಹೆಚ್ಚಾದಲ್ಲಿ ಇಲ್ಲಿನ ಯುವಕರ ಬದುಕಿಗೆ ನೆಲೆಯಾಗಲಿದೆ’ ಎಂದರು ಉದ್ದಿಮೆದಾರ ಶಿವಶಂಕರ್.

ವಿಐಎಸ್ಎಲ್ ಉತ್ಪಾದನೆ ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ವೇಗ ಕೊಡುವ ಕೆಲಸದ ಜತೆಗೆ ಎಂಪಿಎಂ ಆರಂಭದ ಕಡೆಗೂ ಒತ್ತು ನೀಡಿದಲ್ಲಿ ಇಲ್ಲಿನ ಆರ್ಥಿಕತೆ ಸುಧಾರಿಸಲಿದೆ ಎಂಬುದು ಈ ಭಾಗದ ಜನರ ಒತ್ತಾಯ.

ಸದ್ಯ ಎಂಪಿಎಂ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ಹಲವು ಸುತ್ತಿನ ಮಾತುಕತೆ ಸರ್ಕಾರದ ಮಟ್ಟದಲ್ಲೂ ನಡೆದಿದೆ. ಇದಕ್ಕೆ ಫಲ ಸಿಗುವ ನಿರೀಕ್ಷೆಯಲ್ಲಿ ಇದ್ದೇವೆ.

ಎಸ್.ಚಂದ್ರಶೇಖರ್,ಕಾರ್ಮಿಕ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT