ಸೊರಬ: ‘ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಕಾಯಕನಿಷ್ಠೆ ಹೊಂದಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ’ ಎಂದು ಚಲನಚಿತ್ರ ನಿರ್ಮಾಪಕ ಎಂ.ವಿ. ಕೃಷ್ಣಪ್ಪ ಹೇಳಿದರು.

ತಾಲ್ಲೂಕಿನ ಕೊಡಕಣಿ ಗ್ರಾಮದಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಬಡತನದಲ್ಲಿ ಹುಟ್ಟುವುದು ತಪ್ಪಲ್ಲ. ಬಡತನದಲ್ಲಿಯೇ ಕೊನೆಯಾಗುವುದು ತಪ್ಪು. ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಹಲವಾರು ಅವಕಾಶಗಳಿವೆ. ಸ್ಪಷ್ಟ ಗುರಿ, ಛಲ ಇಟ್ಟುಕೊಂಡು ಶ್ರಮಿಸಿದರೆ ಯಶಸ್ಸು ಸಾಧ್ಯ ಎಂದು ಸಲಹೆನೀಡಿದರು.

ದೊಡ್ಡ ಮಟ್ಟದ ಕಬಡ್ಡಿಪಂದ್ಯಾವಳಿಯನ್ನು ಹಮ್ಮಿಕೊಂಡಿರುವುದು ಸಂತಸ ತಂದಿದೆ. ತಾಲ್ಲೂಕಿನ ಸಾಧಕರನ್ನು ಗೌರವಿಸುವ ಭಾಗ್ಯ ಸಿಕ್ಕಿರುವುದು ಖುಷಿ ತಂದಿದೆ. ವೃತ್ತಿಯ ಜೊತೆಗೆ ಸಮಾಜಮುಖಿ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದರು.

ಸಂಸ್ಥೆಯ ಡಿಡಿ ಪಿಕ್ಚರ್ ನಿರ್ದೇಶಕಿ ಎಂ.ವಿ.ಕೆ. ಪೂರ್ಣಿಮಾ ಪಂದ್ಯ ಉದ್ಘಾಟಿಸಿದರು. ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣರಾವ್ ಯಂಕೇನ್ ಅಧ್ಯಕ್ಷತೆವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲ್ಲೂಕಿನ ಸಾಧಕರನ್ನು ಸನ್ಮಾನಿಸಲಾಯಿತು.

ಮಾಸ್ತರ್ ಹನುಮಂತಪ್ಪ ಕೊಡಕಣಿ ಪ್ರಾಸ್ತಾವಿಕ ಮಾತನಾಡಿದರು. ಎಸ್. ಪ್ರದೀಪ್ ಕುಮಾರ್, ಡಾ.ಜ್ಞಾನೇಶ್, ರಾಜಣ್ಣ ಎಂ.ಎನ್. ಯಲಕುಂದ್ಲಿ, ಸಂತೋಷ್ ಮುಟುಗುಪ್ಪೆ, ಯುವರಾಜ್ ಯಂಕೇನ್ ಕೊಡಕಣಿ, ಮುಟುಗುಪ್ಪೆ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತಪ್ಪ, ಈಶ್ವರ ಸೇವಾ ಸಮಿತಿ ಕಾರ್ಯದರ್ಶಿ ಗಿರೀಶ್ ಹೆಗಡೆ, ‘ಅಭಿರಾಮಿ’ ಸಿನಿಮಾ ನಿರ್ದೇಶಕ ಶರಣ್, ವೀರಣ್ಣ ಶಿಕಾರಿಪುರ, ಮಂಜುನಾಥ್ ಶಿಕಾರಿಪುರ, ಆದರ್ಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.