ಸೋಮವಾರ, ಜುಲೈ 4, 2022
20 °C

ರಾಗಿ ಕಾಳು ಎಣಿಸಿ ದಾಖಲೆ ಸೃಷ್ಟಿಸಿದ ಶಿವಮೊಗ್ಗ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಾಮಾನ್ಯವಾಗಿ ಒಂದು ಕೆ.ಜಿ ರಾಗಿಯಲ್ಲಿ ಎಷ್ಟು ಕಾಳುಗಳು ಇರುತ್ತವೆ ಎಂದು ಕೇಳಿದರೆ, ನಿನಗೇನು ಹುಚ್ಚಾ ಎಂದು ಪ್ರಶ್ನೆ ಮಾಡುವ ಮಂದಿಯೇ ಹೆಚ್ಚು. ನಗರದ ಯುವಕ ಒಂದು ಕೆ.ಜಿ. ರಾಗಿಯಲ್ಲಿ ಎಷ್ಟು ಕಾಳುಗಳಿವೆ ಎಂದು ಲೆಕ್ಕ ಹಾಕುವ ಮೂಲಕ ಇಂಡಿಯನ್ ವರ್ಲ್ಡ್‌ ರೆಕಾರ್ಡ್‌ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ.

ಶಿವಮೊಗ್ಗದ ಹೊಯ್ಸಳ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ. ವಿಭಾಗದ ವಿದ್ಯಾರ್ಥಿ ಸಚ್ಚಿನ್ ಈ ಸಾಧನೆ ಮಾಡಿದ ಯುವಕ. ಒಂದು ಕೆ.ಜಿ. ರಾಗಿಯಲ್ಲಿ 3,76,083 ಕಾಳುಗಳು ಇವೆ ಎಂದು ಎಣಿಸಿದ್ದಾರೆ. ಈ ಕಾಳುಗಳ ಲೆಕ್ಕ ಹಾಕಲು ಅವರು 146 ಗಂಟೆ 30 ನಿಮಿಷ ತೆಗೆದುಕೊಂಡಿದ್ದಾರೆ. ಅವರು ಬಾಪೂಜಿನಗರದ ಶಿಕ್ಷಕ ಬಿ.ಎಂ.ಗೋಪಾಲಯ್ಯ ಮತ್ತು ಆರ್. ಶಾರದಾ ಅವರ ಪುತ್ರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು