ಕಾರ್ಗಲ್: ಲಿಂಗನಮಕ್ಕಿ ಜಲಾಶಯದ ಹೆಚ್ಚುವರಿ ನೀರು ಮತ್ತು ಶರಾವತಿ ಕಣಿವೆಯಾದ್ಯಂತ ಸುರಿದ ಮಳೆಯ ನೀರು ಹರಿದು, ರುದ್ರ ರಮಣೀಯವಾಗಿ ಧುಮುಕಿದ ಜೋಗ ಜಲಪಾತ ಇದೀಗ ಸಹಜ ಸ್ಥಿತಿಗೆ ಮರಳಿದ್ದು, ತನ್ನ ನೈಜ ಸೌಂದರ್ಯ ಹೊರ ಸೂಸುತ್ತಿದೆ.

ಮಳೆಗಾಲ ಮುಗಿದೊಡನೆ ಜೋಗ ಜಲಪಾತದ ಸೌಂದರ್ಯ ಬಹು ವಿಭಿನ್ನ. ಶುಭ್ರ ನೀಲಿ ಆಕಾಶದ ಕೆಳಗೆ ಪಶ್ಚಿಮಘಟ್ಟಗಳ ಸಾಲು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಗಿರಿ ಸಾಲುಗಳ ಮಧ್ಯೆ ಸೃಷ್ಟಿಯಾಗಿರುವ ಪ್ರಪಾತದ ಬೋರ್‌ಬಂಡೆಗಳ ಮೇಲೆ ಹಸಿರು ಪಾಚಿ ಕಟ್ಟಿಕೊಂಡು ದಟ್ಟ ವನರಾಶಿಯೇನೊ... ಎಂಬಂತೆ ಭಾಸವಾಗುತ್ತಿದೆ.

ಬಿಳಿ ಹಾಲ್ನೊರೆಯಂತಹ ನೀರು ಬಾನೆತ್ತರದಿಂದ ಧುಮುಕುತ್ತಾ ಇರುವಾಗ, ಚಿಮ್ಮುವ ನೀರಿನ ಕಣಗಳ ಮಧ್ಯೆ ನುಸುಳುವ ಸೂರ್ಯ ರಶ್ಮಿ ಕಾಮನ ಬಿಲ್ಲಿನಂತೆ ಗೋಚರಿಸುತ್ತದೆ. ಈ ಅದ್ಭುತ ಸೃಷ್ಟಿಯ ಸೌಂದರ್ಯವನ್ನು ನೋಡಲು ಪ್ರವಾಸಿಗರಿಗೆ ಕೆಲವೇ ದಿನಗಳು ಮಾತ್ರ ಸಾಧ್ಯವಿದೆ.

ಮಳೆಗಾಲದ ದಿನಗಳು ಕಳೆದು ಬೇಸಿಗೆಯ ದಿನಗಳು ಆರಂಭವಾದರೆ ದಿನೇ... ದಿನೇ... ಜಲಪಾತದ ಸೌಂದರ್ಯ ಕ್ಷೀಣಿಸುತ್ತಾ ಹೋಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.