ಗುರುವಾರ , ಅಕ್ಟೋಬರ್ 17, 2019
21 °C

ಮದ್ಯ ನಿಷೇಧದ ಕನಸು ಕಂಡಿದ್ದರು ಗಾಂಧೀಜಿ: ಸಖಾಫಿ

Published:
Updated:
Prajavani

ಶಿವಮೊಗ್ಗ: ಮಹಾತ್ಮ ಗಾಂಧೀಜಿ ದೇಶಾದ್ಯಂತ ಮದ್ಯಪಾನ, ಮಾದಕ ದ್ರವ್ಯಗಳ ಮಾರಾಟ ನಿಷೇಧಿಸುವ ಕನಸು ಕಂಡಿದ್ದರು ಎಂದು ಎಸ್ಎಸ್ಎಫ್‌ ರಾಜ್ಯ ಉಪಾಧ್ಯಕ್ಷ ಹಾಫಿಲ್ ಸುಫಿಯಾನ್ ಸಖಾಫಿ ಹೇಳಿದರು.

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ಎಸ್ಎಫ್) ಶಿವಮೊಗ್ಗ ವಿಭಾಗದ ಕ್ಯೂ ಟೀಮ್ ಗಾಂಧಿ ಜಯಂತಿ ಅಂಗವಾಗಿ ಗಾಂಧೀಜಿ ಕನಸು ನನಸಾಗಲಿ ಎಂಬ ಘೋಷವಾಕ್ಯದೊಂದಿಗೆ ಬುಧವಾರ ಗೋಪಿವೃತ್ತದಲ್ಲಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಕರು ಮಾದಕ ದ್ರವ್ಯಗಳಿಗೆ ಬಲಿಯಾಗಿ ಉಜ್ವಲ ಭವಿಷ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ಕುಟುಂಬಗಳೂ ಛಿದ್ರವಾಗುತ್ತಿವೆ. ಈ ಕುರಿತು ಸಂಘಟನೆ ರಾಜ್ಯದ ಎಲ್ಲೆಡೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಾದಕ ದ್ರವ್ಯದ ವಿರುದ್ಧ ಪೊಸ್ಟರ್ ಪ್ರದರ್ಶನ, ಬೀದಿ ಭಾಷಣ ಮತ್ತು ಬಿತ್ತಿಪತ್ರಗಳನ್ನು ಹಂಚುವುದರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರ ನೀಡಿದರು.

ವಿದ್ಯಾರ್ಥಿಗಳು ಮಾದಕ ದ್ರವ್ಯ ಮಾಫಿಯಾಕ್ಕೆ ಒಳಗಾಗುವುದ ತಡೆಯಲು ಅಧಿಕಾರಿಗಳು, ಸಾರ್ವಜನಿಕರು ಸಜರಿಸಬೇಕು ಎಂದು ಕೋರಿದರು.
ಎಸ್ಎಸ್ಎಫ್ ರಾಜ್ಯ ಸದಸ್ಯ ಅಬ್ದುಲ್ ಲತೀಫ್ ಸವದಿ, ಅಕ್ಬರ್, ಅಶ್ರಫ್, ಸಾದತ್, ಶೌಕತ್, ಖಲಂದರ್ ಭಾಗವಹಿಸಿದ್ದರು.

Post Comments (+)