ತುಮಕೂರು: ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡದ ಕಾರಣ ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹವಾದ 102 ಜೋಡಿಗಳಿಗೆ ಇನ್ನೂ ಪ್ರೋತ್ಸಾಹ ಧನವೇ ತಲುಪಿಲ್ಲ. ಹೊಸ ಬದುಕಿಗೆ ಈ ಹಣ ಆಸರೆ ಆಗುತ್ತದೆ ಎಂದುಕೊಂಡಿದ್ದ ದಂಪತಿಗಳಲ್ಲಿ ನಿರಾಸೆ ಮೂಡಿಸಿದೆ.

ಅಂತರ್ಜಾತಿ ವಿವಾಹವಾಗಿರುವ ಬಹುತೇಕರು ಕುಟುಂಬದವರನ್ನು ಎದುರು ಹಾಕಿಕೊಂಡೇ ವಿವಾಹ ಆಗಿರುತ್ತಾರೆ. ಇಂತಹ ಹೊತ್ತಿನಲ್ಲಿ ಸರ್ಕಾರವು ಅವರ ಬದುಕಿನ ಬಲಕ್ಕೆ ಪ್ರೋತ್ಸಾಹ ಧನ ನೀಡುತ್ತದೆ. ಬಹಳಷ್ಟು ಜೋಡಿಗಳು ಈ ಹಣದಿಂದಲೇ ಬದುಕು ಕಟ್ಟಿಕೊಂಡಿವೆ.

ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸರ್ಕಾರ ಪರಿಶಿಷ್ಟ ಜಾತಿಯ ಯುವತಿಯನ್ನು ಇತರ ಜಾತಿಯ ಯುವಕ ವಿವಾಹವಾದರೆ ₹3 ಲಕ್ಷ ಹಾಗೂ ಪರಿಶಿಷ್ಟ ಜಾತಿ ಯುವಕನನ್ನು ಅನ್ಯ ಜಾತಿಯ ಯುವತಿ ವರಿಸಿದರೆ ₹2 ಲಕ್ಷ ಪ್ರೋತ್ಸಾಹ ಧನ ನೀಡುತ್ತದೆ. ಹಣವನ್ನು 2018ರಿಂದ ಈಚೆಗೆ ಒಂದೇ ಕಂತಿನಲ್ಲಿ ದಂಪತಿಯ ಜಂಟಿ ಖಾತೆಗೆ ಜಮೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 904 ಜೋಡಿಗಳು ಅಂತರ್ಜಾತಿ ವಿವಾಹವಾಗಿವೆ. ಆದ್ಯತೆ ಮೇರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದುವರೆಗೂ ₹10.77 ಕೋಟಿ ಪ್ರೋತ್ಸಾಹ ಧನ ಫಲಾನುಭವಿಗಳಿಗೆ ನೀಡಲಾಗಿದೆ.

2019– 20ನೇ ಸಾಲಿನಲ್ಲಿ ಫಲಾನುಭವಿಗಳಿಗೆ ಒಟ್ಟು ₹4.56 ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ. ಉಳಿದ 102 ಜೋಡಿಗಳ ಅರ್ಜಿಗಳ ವಿಲೇವಾರಿಗಾಗಿ ₹2.37 ಕೋಟಿ ಅಗತ್ಯವಿದೆ. ಈ ಹಣ ಬಿಡುಗಡೆ ಕೋರಿ ಜಿಲ್ಲಾ ಕಚೇರಿಯಿಂದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಇನ್ನೂ ಹಣ ಬಿಡುಗಡೆ ಆಗಿಲ್ಲ.

ಇಲಾಖೆ ಅಂಕಿ– ಅಂಶದ ಪ್ರಕಾರ ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಿಂದಲೇ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. 2019-20ನೇ ಸಾಲಿನಲ್ಲಿ ಒಟ್ಟು 188 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 54 ಅರ್ಜಿಗಳು ತುಮಕೂರಿನಿಂದಲೇ ಸಲ್ಲಿಕೆಯಾಗಿವೆ.

ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಅಂತರ್ಜಾತಿ ವಿವಾಹಗಳು ನಡೆಯುತ್ತವೆ. ತೆರೆಮರೆಯಲ್ಲಿ ನಡೆಯುವ ವಿವಾಹಗಳು ನೋಂದಣಿ ಆಗುವುದಿಲ್ಲ. ಅಂತಹವರು ಪ್ರೋತ್ಸಾಹಧನದಿಂದ ವಂಚಿತರಾಗುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಚ್.ಎಸ್.ಪ್ರೇಮನಾಥ್.

ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರೋತ್ಸಾಹ ಧನದಲ್ಲಿ ಅರ್ಧದಷ್ಟು ಮೊತ್ತವನ್ನು ಆಯ್ಕೆಯಾದ ದಂಪತಿಗೆ ನೀಡಲಾಗುವುದು. ಅಂದರೆ ಶೇ 50ರಷ್ಟು ಹಣವನ್ನು ಜಂಟಿ ಖಾತೆಗೆ ಜಮೆ ಮಾಡಲಾಗುವುದು. ಇನ್ನುಳಿದ ಶೇ 50ರಷ್ಟು ಅನುದಾನವನ್ನು ‘ರಾಷ್ಟ್ರೀಯ ಉಳಿತಾಯ ಪತ್ರ’ದ ಬಾಂಡ್ ರೂಪದಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.