ಭಾನುವಾರ, ಆಗಸ್ಟ್ 1, 2021
27 °C
ಎರಡು ಸಾವಿರ ಸಮೀಪಿಸುತ್ತಿರುವ ಸೋಂಕಿತರು; ಮೃತರ ಸಂಖ್ಯೆ 57ಕ್ಕೆ

ಮೂವರು ಸಾವು, 135 ಮಂದಿಗೆ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹಾಗೂ ಮೃತಪಡುವವರ ಸರಣಿ ಮುಂದುವರಿದಿದೆ. ಭಾನುವಾರ 135 ಮಂದಿಗೆ ಸೋಂಕು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ತುಮಕೂರು ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 1916 ಮಂದಿಗೆ ಸೋಂಕು ತಗುಲಿದೆ. ಈವರೆಗೆ 57 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ತುಮಕೂರು ತಾಲ್ಲೂಕಿನವರೇ 39 ಮಂದಿ ಇದ್ದಾರೆ. 

ತುಮಕೂರು ನಗರದ ಬಾರ್‌ಲೈನ್ ರಸ್ತೆಯ 60 ವರ್ಷದ ವ್ಯಕ್ತಿ ಜ್ವರ, ಉಸಿರಾಟದ ತೊಂದರೆಯಿಂದ ಜುಲೈ 23 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಮೃತಪಟ್ಟಿದ್ದಾರೆ. ತುಮಕೂರು ಸದಾಶಿವನಗರದ 31 ವರ್ಷದ ಮಹಿಳೆ, ಶಿರಾ ತಾಲ್ಲೂಕಿನ ಮೆಲ್ಲೆಕೆರೆಹಳ್ಳಿಯ 36 ವರ್ಷದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದಾರೆ.

ತಾಲ್ಲೂಕು;ಇಂದಿನ ಸೋಂಕಿತರು (ಆ.1);ಒಟ್ಟು ಸೋಂಕಿತರು;ಮರಣ

ಚಿ.ನಾ.ಹಳ್ಳಿ;17;112;3

ಗುಬ್ಬಿ;1;94;3

ಕೊರಟಗೆರೆ;3;91;2

ಕುಣಿಗಲ್;13;183;3

ಮಧುಗಿರಿ;6;136;2

ಪಾವಗಡ;7;155;1

ಶಿರಾ;24;125;3

ತಿಪಟೂರು;21;126;1

ತುಮಕೂರು;36;801;39

ತುರುವೇಕೆರೆ;7;93;0

ಒಟ್ಟು;135;1916;57

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು