ತುಮಕೂರು: ಜಿಲ್ಲೆಯ ಇಬ್ಬರು ಸಚಿವರು ಪ್ರತಿನಿಧಿಸುವ ಕ್ಷೇತ್ರಗಳಲ್ಲೇ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 38,343 ಮತಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರ ಕೊರಟಗೆರೆ ತಾಲ್ಲೂಕಿನಲ್ಲಿ 25,541, ಮತ್ತೊಬ್ಬ ಸಚಿವ ಕೆ.ಎನ್.ರಾಜಣ್ಣ ಅವರ ಮಧುಗಿರಿ ಕ್ಷೇತ್ರದಲ್ಲಿ 12,802 ಮತಗಳ ಲೀಡ್ ಪಡೆದಿದ್ದಾರೆ.

ಸೋಮಣ್ಣ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳು, ಅಂಚೆ ಮತಗಳನ್ನು ಹೆಚ್ಚುವರಿಯಾಗಿ ತಮ್ಮ ಮತ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಗುಬ್ಬಿಯಲ್ಲಿ 26,490 ಮತಗಳ ಲೀಡ್, ತಿಪಟೂರಿನಲ್ಲಿ 22,700 ಮತಗಳ ಲೀಡ್ ಪಡೆದಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ.

ಪರಮೇಶ್ವರ, ರಾಜಣ್ಣ ತಮ್ಮ ಕ್ಷೇತ್ರದಲ್ಲಿ ಕೊಡಿಸುವ ಲೀಡ್‌ನಿಂದ ಮುದ್ದಹನುಮೇಗೌಡರ ಫಲಿತಾಂಶ ನಿರ್ಧಾರವಾಗಲಿದೆ ಎಂದು ಭಾವಿಸಲಾಗಿತ್ತು. ಈ ಎರಡೂ ಕ್ಷೇತ್ರಗಳಲ್ಲೂ ತಲಾ 25 ಸಾವಿರಕ್ಕೂ ಹೆಚ್ಚು ಲೀಡ್ ಬರುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಕಾಂಗ್ರೆಸ್‌ಗೆ ಲೀಡ್ ಕೊಡಿಸುವ ಬದಲು ಅಷ್ಟೇ ಪ್ರಮಾಣದಲ್ಲಿ ಬಿಜೆಪಿಗೆ ಲೀಡ್ ಕೊಡಿಸಿದ್ದಾರೆ. ಗುಬ್ಬಿಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೂ ಮತ ಕೊಡಿಸಲು ಸಾಧ್ಯವಾಗಿಲ್ಲ. ತಿಪಟೂರು ತಾಲ್ಲೂಕಿನಲ್ಲಿ ಶಾಸಕ ಕೆ.ಷಡಕ್ಷರಿ ಪ್ರಯತ್ನವನ್ನೇ ಮಾಡಲಿಲ್ಲ. ಮತ ಗಳಿಕೆಯ ಅಂಕಿಅಂಶ ಗಮನಿಸಿದರೆ ಪ್ರಮುಖವಾಗಿ ಕಾಂಗ್ರೆಸ್ ಶಾಸಕರ ಪ್ರಯತ್ನ ಗೋಚರಿಸುತ್ತಿಲ್ಲ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

‘ಚುನಾವಣೆಯನ್ನು ಸವಾಲಾಗಿ ತೆಗೆದುಕೊಳ್ಳದಿರುವುದು, ನಿರಾಸಕ್ತಿ, ಯಾರು ಗೆದ್ದರೂ ನಮಗೇನು ಆಗಬೇಕು ಎಂಬ ಮನೋಭಾವನೆಯಿಂದ ಇಂತಹ ಪರಿಸ್ಥಿತಿ ಬಂದಿದೆ. ಗೆಲ್ಲುವಂತಹ ವಾತಾವರಣವಿದ್ದ ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಸಚಿವರನ್ನೇ ನೇರ ಹೊಣೆಗಾರರನ್ನಾಗಿ ಮಾಡಬೇಕು. ಸೋಲಿಗೆ ಇಬ್ಬರು ಸಚಿವರು, ಇಬ್ಬರು ಶಾಸಕರಲ್ಲದೆ ಬೇರೆ ಯಾರೂ ಕಾರಣರಲ್ಲ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರ;ವಿ.ಸೋಮಣ್ಣ;ಎಸ್.ಪಿ.ಮುದ್ದಹನುಮೇಗೌಡ;ಅಂತರ;ಒಟ್ಟು

ಚಿಕ್ಕನಾಯಕನಹಳ್ಳಿ;86,028;79,619;6,409;1,71,727

ತಿಪಟೂರು;84,950;62,250;22,700;1,50,789

ತುರುವೇಕೆರೆ;93,630;49,666;43,964;1,47,792

ತುಮಕೂರು ನಗರ;92,336;85,417;6,919;1,80,590

ತುಮಕೂರು ಗ್ರಾಮಾಂತರ;99,679;70,859;28,820;1,75,330

ಕೊರಟಗೆರೆ;93,446;67,905;25,541;1,66,970

ಗುಬ್ಬಿ;87,146;60,656;26,490;1,52,038

ಮಧುಗಿರಿ;79,494;66,692;12,802;1,51,494

ಅಂಚೆ ಮತ;4,237;2,288;1,946;6,687

ಒಟ್ಟು;7,20,946;5,45,352;1,75,594;12,97,587

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.