ಭಾನುವಾರ, ಅಕ್ಟೋಬರ್ 25, 2020
22 °C

ತುಮಕೂರು: ಒಂದೇ ದಿನ 443 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, 443 ಮಂದಿಗೆ ಸೋಂಕು ದೃಢಪಟ್ಟಿದೆ. ಮಂಗಳವಾರ ನಾಲ್ವರು ಮೃತಪಟ್ಟಿದ್ದಾರೆ.

ಕೊರೊನಾ ಸೋಂಕಿನಿಂದ ಒಬ್ಬರು ಹಾಗೂ ಕೊರೊನಾ ಸೋಂಕಿನ ಜತೆಗೆ ಅನ್ಯಕಾರಣದಿಂದ ಮೂವರು ಸಾವನ್ನಪ್ಪಿದ್ದು, ಈವರೆಗೆ ಒಟ್ಟು 295 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 13,013 ಮಂದಿಗೆ ಸೋಂಕು ತಗುಲಿದ್ದು, ಇನ್ನೂ 2,248 ಸಕ್ರಿಯ ಪ್ರಕರಣಗಳು ಇವೆ.

ತುಮಕೂರು ತಾಲ್ಲೂಕಿನ 170, ಚಿಕ್ಕನಾಯಕನಹಳ್ಳಿ 28, ಗುಬ್ಬಿ 39, ಕೊರಟಗೆರೆ 22, ಕುಣಿಗಲ್ 34, ಮಧುಗಿರಿ 41, ಪಾವಗಡ 29, ಶಿರಾ 28, ತಿಪಟೂರು 28, ತುರುವೇಕೆರೆ ತಾಲ್ಲೂಕಿನ 24 ಮಂದಿಗೆ ಸೋಂಕು ದೃಢವಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು