ಮಂಗಳವಾರ, ಜೂನ್ 15, 2021
27 °C
ಸೋಂಕಿತರ ಸಂಖ್ಯೆ 2850ಕ್ಕೆ ಏರಿಕೆ, 1789 ಮಂದಿ ಗುಣಮುಖ

6 ಮಂದಿ ಸಾವು, 171 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 171 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 6 ಮಂದಿ ಮೃತಪಟ್ಟಿದ್ದಾರೆ.

ಮೃತಪಟ್ಟವರಲ್ಲಿ 5 ಮಂದಿ ತುಮಕೂರು ತಾಲ್ಲೂಕು, ಒಬ್ಬರು ತುರುವೇಕೆರೆ ತಾಲ್ಲೂಕಿನವರಾಗಿದ್ದಾರೆ. ಎಲ್ಲರೂ 50 ವರ್ಷದ ಮೇಲ್ಪಟ್ಟವರು. ಈವರೆಗೆ 86 ಮಂದಿ ಮೃತಪಟ್ಟಂತಾಗಿದೆ.

ನಗರದ ಪಿ.ಎಚ್.ಕಾಲೊನಿ 53 ವರ್ಷದ ಪುರುಷ, 52 ವರ್ಷದ ಮಹಿಳೆ, ಸದಾಶಿವನಗರದ 78 ವರ್ಷದ ವೃದ್ಧ, ಮುತ್ಸಂದ್ರದ 58 ವರ್ಷದ ಮಹಿಳೆ, ಹೆಬ್ಬೂರಿನ 52 ವರ್ಷದ ಪುರುಷ, ತುರುವೇಕೆರೆ ತಾಲ್ಲೂಕು ಖಾಜಾನಾ ಲೇಔಟ್‌ನ 65 ವರ್ಷದ ಮಹಿಳೆ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 2,850 ಮಂದಿಗೆ ಸೋಂಕು ತಗುಲಿದ್ದು, ಶೇ 60ರಷ್ಟು ಮಂದಿ ಗುಣಮುಖರಾಗಿ ಮನೆಗಳಿಗೆ ಹಿಂದಿರುಗಿದ್ದಾರೆ. ಮಂಗಳವಾರವೂ 96 ಮಂದಿ ಮನೆಗೆ ಮರಳಿದ್ದಾರೆ. ಈವರೆಗೆ 1,789 ಮಂದಿ ಗುಣಮುಖರಾಗಿದ್ದು, 975 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು