ತುಮಕೂರು: ಕವಿತೆ ಗಾಯಕ್ಕೆ ಮದ್ದು, ಬದುಕಿಗೆ ಚೈತನ್ಯ ತುಂಬುವ ಒರತೆ ಎಂದು ಲೇಖಕಿ ರಂಗಮ್ಮ ಹೊದೇಕಲ್ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಅಂಗಳ ಕಮ್ಯುನಿಟಿ ಟ್ರಸ್ಟ್, ದಾರಿ ಬುತ್ತಿ ಬಳಗದಿಂದ ಹಮ್ಮಿಕೊಂಡಿದ್ದ ಧನಪಾಲ್ ನಾಗರಾಜಪ್ಪ ಅವರ ‘ಮಾತಾಡುವ ದೇವರು’ ಮತ್ತು ‘ಅವಳಿಗೆ ಹೇಳಿ’ ಕೃತಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ದುಃಖಗಳಿಂದ ಮಾತ್ರ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳಲು, ನೋವಿಗೆ ಮಿಡಿಯಲು, ನಮ್ಮೊಳಗಿನ ಸೃಜನಶೀಲತೆ ಉದ್ದೀಪಿಸಲು ಸಾಧ್ಯ. ಈ ಕೃತಿಯಲ್ಲಿಯೂ ದುಃಖವಿದೆ, ಗಾಯಗಳಿವೆ. ಅದರೆ, ಇವು ಕೇವಲ ಗಾಯಗಳಲ್ಲ, ನಮಗೆ ಜೀವನದ ಪಾಠಗಳನ್ನು ಹೇಳುವ ಅನುಭವಗಳು ಎಂದರು.

ಶಿಕ್ಷಕಿ ಕೆ.ವಿ.ವಿವೇಕ, ‘ಮಾತಾಡುವ ದೇವರು’ ಕೃತಿಯಲ್ಲಿ ಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ, ಮಾನವೀಯ ಮೌಲ್ಯಗಳನ್ನು ಹೊಂದಿಸಿ ಅನುವಾದಿಸಲಾಗಿದೆ. ನಮ್ಮದೇ ಬದುಕಿನ ಕಥೆ ಎಂಬಂತೆ ಮೂಡಿ ಬಂದಿದೆ. ಇದು ಓದುಗರಲ್ಲಿ ವಿಚಾರ ಮಂಥನ ಉಂಟು ಮಾಡುತ್ತದೆ’ ಎಂದು ವಿಶ್ಲೇಷಿಸಿದರು.

ದಾರಿ ಬುತ್ತಿ ಹಾಗೂ ಅಂಗಳ ಟ್ರಸ್ಟ್ನ ಎಸ್.ಕಲಾಧರ್, ಧನಪಾಲ್ ನಾಗರಾಜಪ್ಪ, ಸಿ.ಎಸ್.ಮೇಘನಾ, ಎಸ್.ಆರ್.ದರ್ಶನ್, ಬಿ.ಕೆ.ದಾದಾಪೀರ್, ಅನೀಸ, ರಜಿನಿ, ಎಂ.ಎನ್.ರಂಜಿತ, ಎ.ಪಿ.ಮಾನಸ, ಪಿ.ಆರ್.ನವೀನ್ ಕುಮಾರ್, ಧನುಷ್ ಎಚ್.ಶೇಖರ್, ಡಿ.ಪಿ.ಪಾತಲಿಂಗಯ್ಯ, ಕೆ.ಎಸ್.ಹರಿಕೃಷ್ಣ, ಟಿ.ಮಾರುತಿ, ಕೆ.ಜ್ಞಾನೇಶ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.