ತೋವಿನಕೆರೆ: ದಾಸಾಲಕುಂಟೆ ರೈತನಿಗೆ ಕೃಷಿ ಪ್ರಶಸ್ತಿ

ತೋವಿನಕೆರೆ: ಸಮೀಪದ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸಾಲಕುಂಟೆ ಗ್ರಾಮದ ಜೆ. ಅಭಿಷೇಕ್ಗೆ ಬೆಂಗಳೂರು ಕೃಷಿ ವಿ.ವಿ.ಯು ಕೊರಟಗೆರೆ ತಾಲ್ಲೂಕಿನ ಉತ್ತಮ ಯುವ ಕೃಷಿಕ ಎಂದು ಗುರುತಿಸಿ ಕೃಷಿ ಮೇಳದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
ಅಭಿಷೇಕ್ ತಮಗೆ ಸೇರಿದ ಎರಡು ಎಕರೆ ಜಮೀನಿಲ್ಲಿ ಹೈನುಗಾರಿಕೆ, ಮನೆಗೆ ಬೇಕಾದ ತರಕಾರಿ, ಸಮೃದ್ಧವಾದ ಅಡಿಕೆ, ತೆಂಗಿನ ತೋಟ, ಸಡ್ಡೆ ಸೊಪ್ಪು, ತೊಗರಿ ಬೆಳೆದಿದ್ದಾರೆ. ಕೋಳಿ ಸಾಕಾಣಿಕೆಗಾಗಿ ಮೇವನ್ನು ತಾವೇ ಸ್ವತಃ ತಯಾರು ಮಾಡುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.