ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರ ಸುರಕ್ಷತೆ ಪೊಲೀಸ್ ಆ್ಯಪ್

Last Updated 27 ಜೂನ್ 2018, 16:15 IST
ಅಕ್ಷರ ಗಾತ್ರ

ತುಮಕೂರು: ಸಾರ್ವಜನಿಕರ ಸುರಕ್ಷತೆಗಾಗಿ ಮತ್ತು ಉಪಯೋಗಕ್ಕಾಗಿ ರಾಜ್ಯ ಪೊಲೀಸ್ ಇಲಾಖೆಯು ನೂತನವಾದ ‘ಕರ್ನಾಟಕ ರಾಜ್ಯ ಪೊಲೀಸ್’ ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಮನವಿ ಮಾಡಿದ್ದಾರೆ.

ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ನಂತರ ಒಂದು ಬಾರಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಸಾಫ್ಟವೇರ್ ಸಕ್ರಿಯಗೊಳಿಸುವ ಮೂಲಕ ಮಾಹಿತಿಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಏನೇನು ಮಾಹಿತಿ: ‘ನೀವು ಇರುವ ಸ್ಥಳದ ಸಮೀಪ ಇರುವ ಠಾಣೆಯ ಮಾಹಿತಿ ಮತ್ತು ಆ ಠಾಣೆಗೆ ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ಸಮೇತ ಮಾಹಿತಿ ಪಡೆಯಬಹುದು. ಆ ಪೊಲೀಸ್ ಠಾಣೆಗೆ ಇರುವ ಜಾಗದಿಂದ ಹೇಗೆ ತಲುಪಬೇಕು ಮತ್ತು ಎಷ್ಟು ದೂರ ಆಗುತ್ತದೆ ಎಂಬುದನ್ನು ತಿಳಿಯಬಹುದಾಗಿದೆ’ ಎಂದು ಹೇಳಿದ್ದಾರೆ.

‘ಸಾರ್ವಜನಿಕರು ಯಾವುದೇ ರೀತಿಯ ತುರ್ತು ಸಂದರ್ಭಗಳಲ್ಲಿ ಎಸ್‌ಓಎಸ್ ಎಂಬ ಬಟನ್ ಒತ್ತುವುದರಿಂದ ಸೂಚಿತ ಮೊಬೈಲ್ ಸಂಖ್ಯೆಗೆ ಇರುವ ಜಾಗದ ಮಾಹಿತಿಯುಳ್ಳ ಸಂದೇಶ ತಲುಪುತ್ತದೆ. ಕಳುವಾದ ವಾಹನಗಳ ಮಾಹಿತಿ, ಕಾಣೆಯಾದ ವ್ಯಕ್ತಿಗಳ ಮಾಹಿತಿಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ಈ ಅಪ್ಲಿಕೇಶನ್ ಬಳಸಲು ಅಂತರ್ಜಾಲ ಸಂಪರ್ಕ ಮತ್ತು ಜಿಪಿಎಸ್ ಕೂಡಾ ಚಾಲನೆಯಲ್ಲಿರಬೇಕು’ ಎಂದು ತಿಳಿಸಿದ್ದಾರೆ.

https://play.google.com/store/apps/details?id=com.capulustech.ksppqrs(ಆಂಡ್ರಾಯ್ಡ್ ಫೋನ್‌ಗಳಿಗೆ), https://itunes.apple.com/us/app/ksp/id1358964762?ls=1&mt=8
(ಐಓಎಸ್ ಫೋನ್‌ಗಳಿಗೆ) ಈ ಲಿಂಕ್ ಬಳಸುವ ಮೂಲಕ ಅಪ್ಲಿಕೇಶನ್ ಡೌನ್ ಲೋಡ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT