ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಮಚ್ಚಿನಿಂದ ಹಲ್ಲೆ

7

ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಮಚ್ಚಿನಿಂದ ಹಲ್ಲೆ

Published:
Updated:

ಪಾವಗಡ: ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ವ್ಯಕ್ತಿಯೊಬ್ಬ ಮಚ್ಚಿನಿಂದ ಶನಿವಾರ ರಾತ್ರಿ ಪಟ್ಟಣದಲ್ಲಿ ಹಲ್ಲೆ ನಡೆಸಿದ್ದಾನೆ.

ರಾತ್ರಿ ಬೀಟ್ ಕೆಲಸಕ್ಕಾಗಿ ಪೊಲೀಸ್ ಕ್ವಾಟ್ರಸ್‌ನಲ್ಲಿ ಸಿದ್ಧವಾಗುತ್ತಿದ್ದ ಕಾನ್‌ಸ್ಟೆಬಲ್ ಮೋಹನ್ ಎಬುವವರ ಮೇಲೆ ಪಟ್ಟಣ ಠಾಣೆಯ ಮಹಿಳಾ ಕಾನ್‌ಸ್ಟೆಬಲ್ ಪತಿ ವೆಂಕಟೇಶ್ ಎಂಬುವರು ಏಕಾ ಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಮೋಹನ್ ಅವರ ಕೈಗೆ ಗಾಯಗಳಾಗಿವೆ. ಹಲ್ಲೆ ವೇಳೆ ಬೆಡ್‌ಶೀಟ್ ಅಡ್ಡ ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೆಂಕಟೇಶ್ ಠಾಣೆಗೆ ಬಂದು ಸಿಬ್ಬಂದಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಸಮವಸ್ತ್ರದಲ್ಲಿದ್ದ ಸಿಬ್ಬಂದಿಯನ್ನು ಎಳೆದಾಡಿದ್ದಾರೆ. ಈ ಹಿಂದೆಯೂ ಕೆಲ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ‘ಮಹಿಳಾ ಸಿಬ್ಬಂದಿ ಪತಿ ಎಂಬ ಕಾರಣಕ್ಕಾಗಿ ಈ ವರೆಗೆ ಕ್ರಮ ತೆಗೆದುಕೊಂಡಿರಲಿಲ್ಲ. ರಾತ್ರಿ ಸ್ವಲ್ಪದರಲ್ಲಿ ಅನಾಹುತ ತಪ್ಪಿದೆ’ ಎಂದು ಹೆಸರು ಹೇಳಬಯಸದ ಪೊಲೀಸ್ ಕಾನ್‌ಸ್ಟೆಬಲ್ ತಿಳಿಸಿದರು.

‘ಹಲ್ಲೆ ನಡೆದು ದಿನ ಕಳೆದರೂ ಆರೋಪಿಯ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಸಾಮಾನ್ಯ ಜನರಾಗಿದ್ದರೆ ಅಧಿಕಾರಿಗಳು ಸುಮ್ಮನೆ ಬಿಡುತ್ತಿದ್ದರೆ’ ಎಂದು ಪ್ರಕರಣ ದಾಖಲಿಸಿಕೊಳ್ಳದ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !