ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಅನಾರೋಗ್ಯದಿಂದ ಬಿ‌ಎಸ್‌ಎಫ್ ಯೋಧ ಸಾವು

Published 16 ಅಕ್ಟೋಬರ್ 2023, 13:30 IST
Last Updated 16 ಅಕ್ಟೋಬರ್ 2023, 13:30 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಶ್ರೀಂಗಪುರದ ಬಿಎಸ್ಎಫ್ ಯೋಧ ಸುರೇಶ್ ಕುಮಾರ್ (36) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಪಂಜಾಬ್‌ನ ಪಠಾಣ್ ಕೋಟ್‌ನಲ್ಲಿ ಬಿಎಸ್‌ಎಫ್ ಯೋಧರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಗ್ರಾಮದ ಜಯರಾಮರೆಡ್ಡಿ ಹಾಗೂ ಸುದಮ್ಮ ದಂಪತಿ ಹಿರಿಯ ಮಗ ಸುರೇಶ್ ಕುಮಾರ್ ಅವರಿಗೆ ಪುತ್ರ, ಪುತ್ರಿ, ಪತ್ನಿ ಇದ್ದಾರೆ.

ಒಂದು ತಿಂಗಳ ಹಿಂದೆ ಎರಡನೇ ಮಗುವಿನ ಹೆರಿಗೆ ವೇಳೆ ಗ್ರಾಮಕ್ಕೆ ಆಗಮಿಸಿ ಸೇವೆಗೆ ಮರಳಿದ್ದರು.

ಚಂಢಿಗಡದ ಪಿಜಿಐ ಆಸ್ಪತ್ರೆಯಲ್ಲಿ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT