ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರೆ ನರಸಯ್ಯನ ಕಟ್ಟೆಯಲ್ಲಿ ಬಡಾವಣೆ ನಿರ್ಮಾಣ

ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಖಂಡನೆ , ಸಾರ್ವಜನಿಕ ಆಸ್ತಿ ರಕ್ಷಣೆಗೆ ಒತ್ತಾಯ
Last Updated 5 ಜೂನ್ 2019, 17:30 IST
ಅಕ್ಷರ ಗಾತ್ರ

ತುಮಕೂರು: ಒಂದೆಡೆ ಪರಿಸರ ಸಂರಕ್ಷಣೆ, ಜಾಗೃತಿ ಅಭಿಯಾನಗಳು. ಮತ್ತೊಂದೆಡೆ ಸದ್ದುಗದ್ದಲವಿಲ್ಲದೇ ಕೆರೆ ಕಟ್ಟೆಗಳನ್ನು ನುಂಗು ಹಾಕುತ್ತಿರುವ ಭೂಪರು.

‘ಪರಿಸರ ದಿನಾಚರಣೆ ಸಂದರ್ಭದಲ್ಲಿಯೇ ನಗರದ ಜಯನಗರ ಪಶ್ಚಿಮ ಭಾಗದಲ್ಲಿರುವ 19.1 ಎಕರೆ ವಿಸ್ತೀರ್ಣದ ಗಾರೆನರಸಯ್ಯನಕಟ್ಟೆಯಲ್ಲಿ ಮೂರುವರೆ ಎಕರೆಯಷ್ಟು ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಾಣ ಮಾಡಿ ಸರ್ಕಾರಿ ಆಸ್ತಿ ಕಬಳಿಸಲಾಗಿದೆ’ ಎಂದು ನಗರದ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ಆರೋಪಿಸಿದ್ದಾರೆ.

‘ಈ ಕಟ್ಟೆಯಲ್ಲಿ 2010ಕ್ಕಿಂತ ಮುಂಚೆ ಕಟ್ಟೆಯ ಅಂಗಳದ ತುಂಬಾ ಮಳೆ ನೀರು ಸಂಗ್ರಹವಾಗುತ್ತಿತ್ತು. ಗೆದ್ದಲಹಳ್ಳಿ, ಜಯನಗರ, ಸಪ್ತಗಿರಿ ಬಡಾವಣೆ ಪ್ರದೇಶಕ್ಕೆ ಹವಾನಿಯಂತ್ರಿಕದಂತೆ ಇತ್ತು. ಹಲವಾರು ಜೀವಿಗಳಿಗೂ ಈ ಕಟ್ಟೆ ನೆಚ್ಚಿನ ತಾಣವಾಗಿತ್ತು. ಭೂಗಳ್ಳರ ಕೆಂಗಣ್ಣಿಗೆ ಬಿದ್ದು ಕೆರೆ ನುಂಗುವ ಪ್ರಯತ್ನ ನಡೆಯಿತು. ನಗರದಲ್ಲಿನ ಘನತ್ಯಾಜ್ಯ ಸುರಿದು ಹಂತ ಹಂತವಾಗಿ ಪೂರ್ವ ಭಾಗವನ್ನು ಒತ್ತುವರಿ ಮಾಡಿ ಬಡಾವಣೆ ಮಾಡಿದ್ದಾರೆ’ ಎಂದು ಆಪಾದಿಸಿದ್ದಾರೆ.

‘ಈ ಕಟ್ಟೆಯ ಪೂರ್ವ ಮತ್ತು ಉತ್ತರ ಭಾಗದ ಮೂರುವರೆ ಎಕರೆ ಒತ್ತುವರಿಯಾಗಿದೆ. ಕಟ್ಟೆಯ ವಿಶಾಲವಾದ ರಾಜ ಕಾಲುವೆಯೂ ಸಹ ಒತ್ತುವರಿಯಾಗಿದೆ. ಆದ್ದರಿಂದ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರು ಒತ್ತುವರಿ ತೆರವು ಗೊಳಿಸಬೇಕು. ಕೆರೆ ಅಂಗಳದಲ್ಲಿ ಬಡಾವಣೆ ಮಾಡಲು ಬಳಸಿರುವ ಮಣ್ಣನ್ನು ತೆಗೆಸಿ ಕಟ್ಟೆಯ ನೈಜ ಸ್ಥಿತಿ ಕಾಪಾಡಲು ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT