ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾಟವೇ ಬೆಳವಣಿಗೆಗೆ ಅಡ್ಡಿ

ಜಿಲ್ಲಾ ಚಲವಾದಿ ಮಹಾಸಭಾ ಕಾರ್ಯಕ್ರಮದಲ್ಲಿ ಕೆಂಚಮಾರಯ್ಯ ಅಭಿಮತ
Last Updated 12 ಸೆಪ್ಟೆಂಬರ್ 2020, 15:14 IST
ಅಕ್ಷರ ಗಾತ್ರ

ತುಮಕೂರು: ಸ್ವಾರ್ಥಕ್ಕಾಗಿ ರಾಜಕಾರಣ ಮಾಡದೆ, ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಿದರೆ ಮುಂದಿನ ಪೀಳಿಗೆಗೆ ಒಳ್ಳೆಯ ಸಮಾಜ ನೀಡಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ ತಿಳಿಸಿದರು.

ನಗರದಲ್ಲಿ ಜಿಲ್ಲಾ ಚಲವಾದಿ ಮಹಾಸಭಾ ಆಯೋಜಿಸಿದ್ದ ನೆನಪು ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಬಿ.ಶಾಂತರಾಜು, ಸುಧೀಶ್ವರ್ ಮತ್ತು ಎಸ್.ಆರ್.ಅಭಿನಯ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ದೇಶದಲ್ಲಿ ಶೋಷಿತ ಸಮುದಾಯಗಳಲ್ಲಿ ಪ್ರಮುಖವಾಗಿರುವ ಎಡಗೈ ಮತ್ತು ಬಲಗೈ ಸಮುದಾಯಗಳು ಅಭಿವೃದ್ಧಿಯಿಂದ ಹಿಂದುಳಿಯಲು ನಮ್ಮಗಳ ಆಂತರಿಕ ಕಚ್ಚಾಟವೇ ಕಾರಣ. ನಮ್ಮ ಮಕ್ಕಳ ದೃಷ್ಟಿಯಿಂದ ಸಮುದಾಯದ ಮುಖಂಡರು ಬೇರೆ ಸಮುದಾಯದ ಮುಖಂಡರ ಕುಮ್ಮಕ್ಕಿಗೆ ಬಲಿ ಆಗಬಾರದು. ಯಾವುದು ನಿಜ ಎಂಬುದನ್ನು ಪರಾಮರ್ಶಿಸಿ, ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಎಡಗೈ, ಬಲಗೈ ಎರಡು ಇರುವುದು ಒಂದೇ ಶರೀರದಲ್ಲಿ. ಯಾವುದನ್ನು ನಿರ್ಲಕ್ಷಿಸಿದರೂ ಇಡೀ ಶರೀರಕ್ಕೆ ಹಾನಿ. ಈ ಜ್ಞಾನ ನಮಗೆ ಅಗತ್ಯ ಎಂದರು.

ಬಿ.ಶಾಂತರಾಜು, ಸುಧೀಶ್ವರ್ ನಮಗೆ ಚಿರಪರಿಚಿತರು. ಸಮಾಜದ ಏಳಿಗೆಗಾಗಿ ಕೆಲಸ ಮಾಡಿದರು ಎಂದು ಸ್ಮರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ‘ಯಾವುದೇ ಕ್ಷೇತ್ರವಾಗಿರಲಿ ಸಂಘಟನೆ ಮುಖ್ಯ. ಒಂದು ಉದಾತ್ತ ಗುರಿಯೆಡೆಗೆ ಎಲ್ಲರನ್ನು ಕರೆದುಕೊಂಡು ಹೋಗುವ ವ್ಯಕ್ತಿ ಮಾತ್ರ ನಾಯಕನಾಗಿ ಬೆಳೆಯಲು ಸಾಧ್ಯ. ಅಂತಹ ಕೆಲಸವನ್ನು ಈ ಮೂವರು ಮಾಡಿದ್ದಾರೆ’ ಎಂದು ಹೇಳಿದರು.

ಹಿರಿಯ ರಂಗ ಕಲಾವಿದ ಲಕ್ಷ್ಮಣದಾಸ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಮಾಜಿ ಅಧ್ಯಕ್ಷ ಚಿಕ್ಕಣ್ಣ, ನಗರಪಾಲಿಕೆ ಮಾಜಿ ಸದಸ್ಯ ನರಸೀಯಪ್ಪ, ಮಾಜಿ ಉಪಮೇಯರ್ ಟಿ.ಆರ್.ನಾಗರಾಜು, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಬಿ.ಜಿ.ನಿಂಗರಾಜು, ಜಿಲ್ಲಾ ಚಲವಾದಿ ಮುಖಂಡರಾದ ಭಾನುಪ್ರಕಾಶ್, ದಲಿತ ಚಲವಾದಿ ಮಹಾಸಭಾ ಅಧ್ಯಕ್ಷ ಚಂದ್ರಪ್ಪ, ಜಿ.ಆರ್.ಗಿರಿಜೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT