ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಕೋಳಿ ಮಾಂಸ ಬಲು ದುಬಾರಿ!

ಕೊತ್ತಂಬರಿ ಸೊಪ್ಪು ಕೆ.ಜಿ ₹120ಕ್ಕೆ ಏರಿಕೆ; ಇಳಿಯದ ಬೀನ್ಸ್ ಬೆಲೆ
Published 18 ಮೇ 2024, 14:46 IST
Last Updated 18 ಮೇ 2024, 14:46 IST
ಅಕ್ಷರ ಗಾತ್ರ

ತುಮಕೂರು: ಎರಡು ಶತಕ ದಾಟಿರುವ ಬೀನ್ಸ್ ಬೆಲೆ ಸದ್ಯಕ್ಕೆ ಇಳಿಯುವಂತೆ ಕಾಣುತ್ತಿಲ್ಲ. ಸೊಪ್ಪು ದರ ಮತ್ತಷ್ಟು ಏರಿಕೆಯಾಗಿದ್ದರೆ, ಕೋಳಿ ಮಾಂಸ ಗಗನಮುಖಿಯಾಗಿದೆ. ಆದರೆ ಹಣ್ಣಿನ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ತಗ್ಗದ ಬೀನ್ಸ್: ದುಬಾರಿಯಾಗಿರುವ ಬೀನ್ಸ್ ಬೆಲೆ ಮತ್ತಷ್ಟು ಏರುಗತಿಯಲ್ಲಿ ಸಾಗಿದೆ. ಕಳೆದ ಎರಡು ವಾರಗಳಿಂದ ದ್ವಿಶತಕ ಬಾರಿಸಿದ್ದು, ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಈ ವಾರವೂ ಅದೇ ಸ್ಥಿತಿಯಲ್ಲಿ ಮುಂದುವರಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಮತ್ತಷ್ಟು ದುಬಾರಿಯಾಗಿದೆ. ತೀರ ಅಗತ್ಯ ಇದ್ದವರು, ಕೆಲವರಷ್ಟೇ ಬೀನ್ಸ್ ಬಳಸುತ್ತಿದ್ದಾರೆ. ಬಹುತೇಕರು ತಿನ್ನುವುದನ್ನೇ ನಿಲ್ಲಿಸಿದ್ದಾರೆ. ಇನ್ನೂ ಕೆಲವು ವಾರಗಳ ಕಾಲ ಬೆಲೆಯಲ್ಲಿ ಇಳಿಕೆಯಾಗುವ ಸೂಚನೆಗಳು ಕಾಣುತ್ತಿಲ್ಲ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಮೂಲಂಗಿ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿರುವುದನ್ನು ಹೊರತುಪಡಿಸಿದರೆ ಯಾವ ತರಕಾರಿ ದರದಲ್ಲೂ ಇಳಿಕೆ ಕಂಡಿಲ್ಲ. ಕೆಲವು ತರಕಾರಿಗಳು ಮತ್ತೆ ಹೆಚ್ಚಳವಾಗಿದ್ದು, ಬೆಂಡೆಕಾಯಿ, ಎಲೆಕೋಸು, ಹೂ ಕೋಸು, ತೊಂಡೆಕಾಯಿ, ನುಗ್ಗೆಕಾಯಿ ತಲಾ ಕೆ.ಜಿಗೆ ₹10 ಜಿಗಿತವಾಗಿದೆ. ಹಸಿರು ಮೆಣಸಿನಕಾಯಿ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದ್ದು, ಕೆ.ಜಿ ₹70–80ಕ್ಕೆ ಮಾರಾಟವಾಗುತ್ತಿದೆ. ಕ್ಯಾಪ್ಸಿಕಂ ಸಹ ಮತ್ತಷ್ಟು ಹೆಚ್ಚಳವಾಗಿದೆ.

ಸೊಪ್ಪು ತುಟ್ಟಿ: ಸೊಪ್ಪಿನ ಬೆಲೆ ಇದೇ ರೀತಿ ಗಗನಮುಖಿಯಾದರೆ, ಕೆಲವೇ ದಿನಗಳಲ್ಲಿ ದಾಖಲೆ ಮಟ್ಟಕ್ಕೆ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕೆ.ಜಿಗೆ ₹20 ತುಟ್ಟಿಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹100–120, ಸಬ್ಬಕ್ಕಿ ಕೆ.ಜಿ ₹100–120, ಮೆಂತ್ಯ ಸೊಪ್ಪು ಕೆ.ಜಿ ₹100–120, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಏರಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಳೆ ಆರಂಭವಾಗಿದ್ದು, ತಾಪಮಾನ ತಗ್ಗಿದರೆ ಮುಂದಿನ ಒಂದೆರಡು ವಾರಗಳಲ್ಲಿ ಇಳಿಕೆಯಾಗಬಹುದು.

ಹಣ್ಣು: ಏಲಕ್ಕಿ ಬಾಳೆ, ಕಿತ್ತಳೆ ಹಣ್ಣಿನ ಧಾರಣೆ ತುಸು ಹೆಚ್ಚಳವಾಗಿರುವುದನ್ನು ಹೊರತುಪಡಿಸಿದರೆ ಉಳಿದ ಹಣ್ಣುಗಳು ಯಥಾಸ್ಥಿತಿ ಕಾಯ್ದುಕೊಂಡಿವೆ. ತೋತಾಪುರಿ ಕೆ.ಜಿ ₹100, ಬೆನಿಷಾ ಕೆ.ಜಿ ₹80ಕ್ಕೆ ಮಾರಾಟವಾಗುತ್ತಿದೆ.

ಅಡುಗೆ ಎಣ್ಣೆ: ಅಡುಗೆ ಎಣ್ಣೆ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹108–110, ಪಾಮಾಯಿಲ್ ಕೆ.ಜಿ ₹88–90, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ, ಧಾನ್ಯ: ಬೇಳೆ ಕಾಳುಗಳು, ಧಾನ್ಯಗಳ ಧಾರಣೆ ಯಥಾಸ್ಥಿತಿ ಮುಂದುವರಿದಿದೆ. ಸಕ್ಕರೆ ದರ ಅಲ್ಪ ಏರುಗತಿಯಲ್ಲೇ ಇದೆ. ಅಕ್ಕಿ ಕೊಂಚ ಕಡಿಮೆಯಾದಂತೆ ಕಾಣುತ್ತಿದೆ.

ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ದರದಲ್ಲಿ ಏರಿಳಿತ ಕಂಡು ಬಂದಿದ್ದರೂ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಒಣ ಹಣ್ಣುಗಳು ಅಲ್ಪ ದುಬಾರಿಯಾಗಿವೆ.

ಧನ್ಯ ಕೆ.ಜಿ ₹100–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹250–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹230–240, ಹುಣಸೆಹಣ್ಣು ₹120–140, ಕಾಳುಮೆಣಸು ಕೆ.ಜಿ ₹630–650, ಜೀರಿಗೆ ಕೆ.ಜಿ ₹270–300, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹85–90, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹900–950, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,300, ಬಾದಾಮಿ ಕೆ.ಜಿ ₹620–650, ಗೋಡಂಬಿ ಕೆ.ಜಿ ₹650–700, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಗಗನಮುಖಿ: ಕೋಳಿ ಮಾಂಸದ ಬೆಲೆ ವಾರದಿಂದ ವಾರಕ್ಕೆ ಗಗನಮುಖಿಯಾಗಿದ್ದು, ಇದೇ ರೀತಿ ಏರಿಕೆ ಮುಂದುವರಿಸಿದರೆ ದಾಖಲೆ ಮಟ್ಟ ಮುಟ್ಟಲಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹180, ರೆಡಿ ಚಿಕನ್ ಕೆ.ಜಿ ₹260, ಸ್ಕಿನ್‌ಲೆಸ್ ಕೆ.ಜಿ ₹300, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹130ಕ್ಕೆ ಹೆಚ್ಚಳವಾಗಿದೆ.

ಬಿಸಿಲಿನ ತಾಪ ತಾಳಲಾರದೆ ಕೋಳಿಗಳು ಸಾವನ್ನಪ್ಪುತ್ತಿದ್ದು, ಉತ್ಪಾದನೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೋಳಿ ಸಾಕಾಣಿಕೆ ಒಂದು ಉದ್ಯಮವಾಗಿ ಬೆಳೆದಿದ್ದು, ವಿವಿಧ ಕಂಪನಿಗಳು ಕೋಳಿ ಮರಿಗಳನ್ನು ರೈತರಿಗೆ ಕೊಟ್ಟು ಸಾಕಾಣಿಕೆ ಮಾಡಿಸುತ್ತವೆ. ಕಂಪನಿಯವರು ನಿಗದಿಪಡಿಸಿದ ಬೆಲೆಗೆ ರೈತರು ಕೋಳಿ ಮಾರಾಟ ಮಾಡಬೇಕು. ಉತ್ಪಾದನೆ ಕಡಿಮೆಯಾಗಿದೆ ಎಂಬ ನೆಪ ಹೇಳಿಕೊಂಡು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ.

ಮೀನು ದುಬಾರಿ: ಒಂದು ಕಡೆ ಕೋಳಿ ಮಾಂಸದ ಬೆಲೆ ಹೆಚ್ಚಳವಾಗುತ್ತಿದ್ದರೆ, ಸಮುದ್ರ ಮೀನು ಅದೇ ದಾರಿಯಲ್ಲಿ ಸಾಗುತ್ತಿದೆ. ಅಂಜಲ್ ಮೀನಿನ ದರ ಅಲ್ಪ ಕಡಿಮೆಯಾಗಿರುವುದನ್ನು ಹೊರತುಪಡಿಸಿದರೆ, ಉಳಿದ ಮೀನು ಮತ್ತಷ್ಟು ದುಬಾರಿಯಾಗಿದೆ.

ಬಂಗುಡೆ ಕೆ.ಜಿ ₹260, ಬೂತಾಯಿ ಕೆ.ಜಿ ₹320, ಬೊಳಿಂಜರ್ ಕೆ.ಜಿ ₹210, ಅಂಜಲ್ ಕೆ.ಜಿ ₹1,320, ಬಿಳಿಮಾಂಜಿ ಕೆ.ಜಿ ₹1,630, ಕಪ್ಪುಮಾಂಜಿ ಕೆ.ಜಿ ₹1,000, ಇಂಡಿಯನ್ ಸಾಲ್ಮನ್ ಕೆ.ಜಿ ₹960, ಸೀಗಡಿ ಕೆ.ಜಿ ₹460–650, ಏಡಿ ಕೆ.ಜಿ 480ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ದರ ಪಟ್ಟಿ

ಹಣ್ಣು (ಬೆಲೆ ಕೆ.ಜಿ ₹)

ಸೇಬು;220

ದಾಳಿಂಬೆ;200

ಮೂಸಂಬಿ;80

ಕಿತ್ತಳೆ;130

ಸಪೋಟ;100

ಏಲಕ್ಕಿ ಬಾಳೆ;65

ಪಚ್ಚಬಾಳೆ;35

ಸೀಬೆ;120

ಪೈನಾಪಲ್;90

ಪಪ್ಪಾಯ;20

ಕರಬೂಜ;50

ಕಲ್ಲಂಗಡಿ;30

ದ್ರಾಕ್ಷಿ;50

******

ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)

ತೊಗರಿ ಬೇಳೆ;165–170

ಕಡಲೆ ಬೇಳೆ;80–85

ಉದ್ದಿನ ಬೇಳೆ;140–145

ಹೆಸರು ಬೇಳೆ;120–125

ಕಡಲೆಕಾಳು;78–80

ಹೆಸರು ಕಾಳು;120–125

ಅಲಸಂದೆ;95–100

ಅವರೆಕಾಳು;130–140

ಹುರುಳಿಕಾಳು;70–75

ಹುರಿಗಡಲೆ;95–100

ಬಟಾಣಿ;95–100

ಕಡಲೆ ಬೀಜ;120–125

ಗೋಧಿ;40–44

ಸಕ್ಕರೆ;41–42

**

ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)

ಬೀನ್ಸ್;180–200

ಕ್ಯಾರೇಟ್;40–50

ಬೀಟ್ರೂಟ್‌;30–40

ಈರುಳ್ಳಿ;20–25

ಬೆಳ್ಳುಳ್ಳಿ;160–180

ಟೊಮೆಟೊ;20–25

ಆಲೂಗಡ್ಡೆ;30–35

ಗೆಡ್ಡೆಕೋಸು;40–50

ಮೂಲಂಗಿ;30–40

ಬೆಂಡೆಕಾಯಿ;40–50

ಬದನೆಕಾಯಿ;25–30

ಎಲೆಕೋಸು;35–40

ಹೂಕೋಸು(1ಕ್ಕೆ);30–40

ತೊಂಡೆಕಾಯಿ;40–50

ಹಾಗಲಕಾಯಿ;40–50

ನುಗ್ಗೆಕಾಯಿ;50–60

ಮೆಣಸಿನಕಾಯಿ;70–80

ಕ್ಯಾಪ್ಸಿಕಂ;50–60

ಶುಂಠಿ;100–120

ಸೌತೆಕಾಯಿ 1ಕ್ಕೆ;8–10

ನಿಂಬೆಹಣ್ಣು 1ಕ್ಕೆ;5–6

ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT