ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರ ದಿನಾಚರಣೆ

Last Updated 1 ಅಕ್ಟೋಬರ್ 2021, 5:08 IST
ಅಕ್ಷರ ಗಾತ್ರ

ಮಧುಗಿರಿ: ‘ಪೌರ ಕಾರ್ಮಿಕರ ಶ್ರಮದಿಂದಾಗಿ ಪಟ್ಟಣದಲ್ಲಿ ರೋಗರುಜಿನ ನಿಯಂತ್ರಣವಾಗುತ್ತಿದೆ. ಅವರು ಮಾಡುವ ಕೆಲಸಕ್ಕೆ ಏನು ಕೊಟ್ಟರು ಸಾಲದು’ ಎಂದು ಪುರಸಭೆ ಅಧ್ಯಕ್ಷ ತಿಮ್ಮರಾಜು ತಿಳಿಸಿದರು.

ಪಟ್ಟಣದ ಮಾಲಿಮರಿಯಪ್ಪ ರಂಗ ಮಂದಿರದಲ್ಲಿ ಪುರಸಭೆಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರಿಗೆ ಯಾವುದೇ ಸಮಸ್ಯೆ ಉಂಟಾದರೂ ಅದನ್ನು ಬಗೆಹರಿಸುವಲ್ಲಿ ಪುರಸಭೆ ಆಡಳಿತ ಸದಾ ಸಿದ್ಧವಿರುತ್ತದೆ ಎಂದರು.

ಪುರಸಭೆ ಸದಸ್ಯ ಎಂ.ಎಸ್. ಚಂದ್ರಶೇಖರ್ ಮಾತನಾಡಿ, ದಿನಗೂಲಿ ನೌಕರರ ವಿಶೇಷ ಭತ್ಯೆ ₹ ಸಾವಿರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸೋಣ. ಜೊತೆಗೆ, ವಾಹನದ ಚಾಲಕರಿಗೆ ಆರೋಗ್ಯ ವಿಮೆ ಮಾಡಿಸಬೇಕು ಎಂದು ಒತ್ತಾಯಿಸಿದರು.

ಪೌರ ಕಾರ್ಮಿಕರ ದಿನಾಚರಣೆಗೆ ಮುಖ್ಯಾಧಿಕಾರಿಯೇ ಗೈರುಹಾಜರಾಗಿದ್ದಾರೆ. ಪೌರ ಕಾರ್ಮಿಕರಿಗೆ ₹ 7 ಸಾವಿರ ಹಾಗೂ ದಿನಗೂಲಿ ನೌಕರರಿಗೆ ₹ 3 ಸಾವಿರ ಗೌರವಧನ ನೀಡಬೇಕಿತ್ತು. ಆದರೆ, ಆ ಕಾರ್ಯವೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ. ಗೋವಿಂದರಾಜು, ಸದಸ್ಯರಾದ ಸುಜಾತಾ ಶಂಕರನಾರಾಯಣ್, ನರಸಿಂಹಮೂರ್ತಿ, ಕೆ. ನಾರಾಯಣ್, ಲಾಲಪೇಟೆ ಮಂಜುನಾಥ್, ಮಂಜುನಾಥ್ ಆಚಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT