ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ‘ತಲ್‌ ಸೈನಿಕ್‌’ ಶಿಬಿರಕ್ಕೆ ಕಮಾಂಡರ್‌ ಭೇಟಿ

Published 1 ಜುಲೈ 2024, 14:21 IST
Last Updated 1 ಜುಲೈ 2024, 14:21 IST
ಅಕ್ಷರ ಗಾತ್ರ

ತುಮಕೂರು: ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಸಂಯುಕ್ತ ವಾರ್ಷಿಕ ತರಬೇತಿ, ‘ತಲ್ ಸೈನಿಕ್‌’ ಶಿಬಿರಕ್ಕೆ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‍ನ ಕಮಾಂಡರ್‌ ಕರ್ನಲ್‌ ರಾಜೇಶ್‌ ಸೋಮವಾರ ಭೇಟಿ ನೀಡಿದರು.

ಫೈರಿಂಗ್‌, ಜೆಡಿಎಸ್‌ಎಸ್‌, ಮ್ಯಾಪ್‌ ರೀಡಿಂಗ್‌, ಆರೋಗ್ಯ ಮತ್ತು ನೈರ್ಮಲ್ಯ, ಅಪ್‍ಸ್ಟಿಕಲ್‌ ತರಬೇತಿ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ, ಶಿಬಿರಾರ್ಥಿಗಳ ಜತೆ ಸಂವಾದ ನಡೆಸಿದರು.

ತರಬೇತಿಯ ಸದುಪಯೋಗ ಪಡೆಯುವ ಮೂಲಕ ಶಿಬಿರಗಳಿಗೆ ಆಯ್ಕೆಯಾಗುವಂತೆ ಪ್ರೋತ್ಸಾಹಿಸಿದರು. ಅಂತರ್‌ ಬೆಟಾಲಿಯನ್‌ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನಾಲ್ಕನೇ ಕರ್ನಾಟಕ ಬೆಟಾಲಿಯನ್‍ನ ಕಮಾಂಡಿಂಗ್‌ ಆಫೀಸರ್‌ ಕರ್ನಲ್‌ ಜಿ.ಎಸ್.ಗುಜ್ರಾಲ್‌, ಎ.ಒ.ಕರ್ನಲ್ ನರೇಂದ್ರ ಭಂಡಾರಿ, 1ನೇ ಕರ್ನಾಟಕ ಬೆಟಾಲಿಯನ್‍ನ ಲೆಫ್ಟಿನೆಂಟ್‌ ಕರ್ನಲ್‌ ರವೀಂದ್ರ ಸಿಂಗ್‌, ಸುಬೇದಾರ್ ಮುಜರ್‌ ದಿನೇಶ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT