ತುಮಕೂರು: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಉಂಡೆ ಕೊಬ್ಬರಿ ಧಾರಣೆ ₹26 ಸಾವಿರದ ಗಡಿ ದಾಟುವ ಮೂಲಕ ಹೊಸ ದಾಖಲೆ ಬರೆದಿದೆ.

ಉಂಡೆ ಕೊಬ್ಬರಿ ಕ್ವಿಂಟಲ್ಗೆ ಗರಿಷ್ಠ ₹26,167ಕ್ಕೆ ಮಾರಾಟವಾಗಿದ್ದು, ಮಾದರಿ ₹25,300, ಕನಿಷ್ಠ ₹23 ಸಾವಿರ ಬೆಲೆ ಸಿಕ್ಕಿದೆ. ತಿಪಟೂರು ಎಪಿಎಂಸಿಯಲ್ಲಿ 3,351 ಕ್ವಿಂಟಲ್ (7795 ಚೀಲ) ಆವಕವಾಗಿತ್ತು.

ಮಾರ್ಚ್ನಿಂದ ಕೊಬ್ಬರಿಗೆ ಉತ್ತಮ ಧಾರಣೆ ಸಿಗುತ್ತಿದ್ದರೂ ರೈತರ ಬಳಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬರಿ ದಾಸ್ತಾನು ಇಲ್ಲ. ಹಾಗಾಗಿ ಬೆಲೆ ಏರಿಕೆಯ ಲಾಭ ರೈತರಿಗೆ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಧಾರಣೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರ್ತಕರು ಹೇಳುತ್ತಾರೆ.

ಮೇ ಅಂತ್ಯದಲ್ಲಿ ₹20 ಸಾವಿರ ದಾಟಿದ್ದ ಕ್ವಿಂಟಲ್ ಕೊಬ್ಬರಿ ಜೂನ್ ಮೊದಲ ವಾರ ₹22 ಸಾವಿರ, ಜೂನ್ ಮಧ್ಯದಲ್ಲಿ ₹24 ಸಾವಿರಕ್ಕೆ ಏರಿಕೆಯಾಗಿತ್ತು. ಒಂದು ತಿಂಗಳ ಅಂತರದಲ್ಲಿ ಕ್ವಿಂಟಲ್ಗೆ ₹5 ಸಾವಿರ ಹೆಚ್ಚಳವಾದಂತಾಗಿದೆ.

ಮಾರುಕಟ್ಟೆಯಲ್ಲಿ ಕಡಿಮೆಯಾಗುತ್ತಿರುವ ಆವಕ, ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಕೊಬ್ಬರಿ, ಉತ್ತರ ಭಾರತದಲ್ಲಿ ಬೇಡಿಕೆ ಹೆಚ್ಚಳ, ತೆಂಗು ಬೆಳೆಯುವ ಕೇರಳ, ತಮಿಳುನಾಡಿನಲ್ಲೂ ಇಳುವರಿ ಕುಸಿತ ಹಾಗೂ ಹರಾಜು ಪ್ರಕ್ರಿಯೆಯಲ್ಲಿ ತಂದ ಬದಲಾವಣೆ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.