ತುಮಕೂರು: ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ಜಿಲ್ಲೆಯಲ್ಲಿ 9 ಸಾವಿರ ಮಂದಿಗೆ ಸೋಂಕು ತಗುಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢವಾಗಿತ್ತು. ಸೆಪ್ಟೆಂಬರ್ನಲ್ಲಿ ಪ್ರತಿ ದಿನ ಸರಾಸರಿ 300 ಜನರಿಗೆ ಸೋಂಕು ತಗುಲಿದೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 14,365 ಮಂದಿಗೆ ಸೋಂಕು ತಗುಲಿದ್ದು 11,632 ಮಂದಿ ಗುಣಮುಖರಾಗಿದ್ದಾರೆ. 2,415 ಮಂದಿ ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ 318ಕ್ಕೆ ತಲುಪಿದೆ.

ಶನಿವಾರ ಮತ್ತೆ 224 ಮಂದಿಗೆ ಸೋಂಕು ತಗುಲಿದ್ದು ಆರು ಮಂದಿ ಪುರುಷರು ಮೃತಪಟ್ಟಿದ್ದಾರೆ. ಇದೇ ದಿನ 266 ಮಂದಿ ಗುಣಮುಖರಾಗಿ ಮನೆಗಳಿಗೆ ತೆರಳಿದರು.

ತಿಪಟೂರಿನ ಕೋಟೆ ನಗರ, ತಿಪಟೂರು ತಾಲ್ಲೂಕಿನ ಪೆದ್ದಿಹಳ್ಳಿ, ಪಾವಗಡ ತಾಲ್ಲೂಕಿನ ಕದಿರೆಹಳ್ಳಿ, ಮಂಗಳವಾಡ, ಗುಬ್ಬಿ ತಾಲ್ಲೂಕಿನ ಶ್ರೀನಗರ, ತುಮಕೂರಿನ ಕುವೆಂಪು ನಗರದ ವ್ಯಕ್ತಿ ಮೃತಪಟ್ಟಿದ್ದಾರೆ.

ತುಮಕೂರು ತಾಲ್ಲೂಕಿನ 70, ಚಿಕ್ಕನಾಯಕನಹಳ್ಳಿ 26, ಗುಬ್ಬಿ 26, ಕೊರಟಗೆರೆ 9, ಕುಣಿಗಲ್ 10, ಮಧುಗಿರಿ 16, ಪಾವಗಡ 20, ಶಿರಾ 15, ತಿಪಟೂರು 19, ತುರುವೇಕೆರೆ ತಾಲ್ಲೂಕಿನ 13 ಮಂದಿಗೆ ಸೋಂಕು ದೃಢವಾಗಿದೆ. ಇವರಲ್ಲಿ 141 ಪುರುಷರು ಹಾಗೂ 83 ಮಹಿಳೆಯರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.