ತುಮಕೂರು/ಶಿರಾ: ಜಿಲ್ಲೆಯಲ್ಲಿ ಗುರುವಾರ 7 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಒಂದೇ ದಿನ ಇಷ್ಟು ಮಂದಿಗೆ ಕೊರೊನಾ ಪತ್ತೆ ಆಗಿರುವುದು ಜಿಲ್ಲೆಯ ಮಟ್ಟಿಗೆ ಇದೇ ಮೊದಲು. ಈ ಮೂಲಕ ಸೋಂಕಿತರ ಸಂಖ್ಯೆ 41ಕ್ಕೇರಿದೆ. ಆಗಾಗ್ಗೆ ಸೋಂಕಿತರು ಪತ್ತೆಯಾಗುತ್ತಿದ್ದರು. ಆದರೆ ಈ ದಿಢೀರ್ ಹೆಚ್ಚಳವು ಜನರಲ್ಲಿ ತಲ್ಲಣವನ್ನು ಮೂಡಿಸಿದೆ.

ಶಿರಾದ ಪಾರ್ಕ್ ಮೊಹಲ್ಲಾದ ವ್ಯಕ್ತಿಯೊಬ್ಬರಲ್ಲಿ ಇತ್ತೀಚೆಗೆ ಸೋಂಕು ಪತ್ತೆಯಾಗಿತ್ತು. ಅವರು ಆಂಧ್ರಪ್ರದೇಶದ ಹಿಂದೂಪುರದ ಸಂಪರ್ಕ ಹೊಂದಿದ್ದರು. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ತಾಯಿ, ಪತ್ನಿ, ಸಹೋದರ ಹಾಗೂ 3 ಮಕ್ಕಳಿಗೆ ಕೊರೊನಾ ಅಂಟಿದೆ. ಈ ಮೂಲಕ ಇಡೀ ಕುಟುಂಬವೇ ಸೋಂಕಿಗೆ ತುತ್ತಾಗಿದೆ.

ಮಧುಗಿರಿಯ 40 ವರ್ಷದ ವ್ಯಕ್ತಿಯೊಬ್ಬರಲ್ಲಿಯೂ ಸೋಂಕು ಕಂಡು ಬಂದಿದೆ. ಅವರಿಗೆ ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲ. ಜ್ವರದಿಂದ ಬಳಲುತ್ತಿದ್ದ ಅವರು ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಯೇ ಗಂಟಲು ಸ್ರಾವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಏಳು ಮಂದಿಯನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಶಿರಾದಲ್ಲಿ ಇದಕ್ಕೂ ಮುನ್ನ ನಾಲ್ಕು ಮಂದಿಗೆ ಕೊರೊನಾ ಪತ್ತೆಯಾಗಿತ್ತು. ಈಗ ಆರು ಮಂದಿಗೆ ತಗುಲುವ ಮೂಲಕ ಸೋಂಕಿತರ ಸಂಖ್ಯೆ 10ಕ್ಕೇರಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ತಾಲ್ಲೂಕು ಶಿರಾ ಎನಿಸಿದೆ.

‘ಈ ಏಳು ಮಂದಿಯಲ್ಲಿ ಯಾರಿಗೂ ಉಸಿರಾಟದ ತೊಂದರೆ ಕಂಡು ಬಂದಿಲ್ಲ. ಆರೋಗ್ಯ ಸ್ಥಿರವಾಗಿದೆ’ ಎಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೀಗೆ ಒಮ್ಮೆಯೇ ಹೆಚ್ಚಿರುವುದು ನಾಗರಿಕರಲ್ಲಿ ಆತಂಕವನ್ನು ಮೂಡಿಸಿದೆ. ಈಗಾಗಲೇ 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಮೂರು ಸಕ್ರಿಯ ಪ್ರಕರಣಗಳು ಮಾತ್ರ ಇದ್ದವು. ಈಗ ಈ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದೆ.

ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಗುರುವಾರ 100 ಮಂದಿಯ ಗಂಟಲು ಸ್ರಾವ ಮತ್ತು ಕಫದ ಮಾದರಿಗಳನ್ನು ತಪಾಸಣೆಗೆ ಪಡೆಯಲಾಗಿದೆ. 587 ಮಾದರಿಗಳ ವರದಿಗಳು ಬಾಕಿ
ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.