ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ನಾಲೆ ದುರಸ್ತಿಕಾಮಗಾರಿಯಲ್ಲಿ ಭ್ರಷ್ಟಾಚಾರ: ಆರೋಪ

Last Updated 12 ಅಕ್ಟೋಬರ್ 2021, 1:53 IST
ಅಕ್ಷರ ಗಾತ್ರ

ತುರುವೇಕೆರೆ: ‘ಬೆಂಗಳೂರು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ಹೇಮಾವತಿ ಟಿ.ಬಿ.ಸಿ ನಾಲೆಯ ದುರಸ್ತಿ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ’ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.

ಪಟ್ಟಣದಲ್ಲಿ ಸೋಮವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೇಮಾವತಿ ನಾಲಾ 1,2 ನಿಂದ 0.70 ವೈ ಅಲೈಮೆಂಟ್‌ನಿಂದ 75 ಕಿ.ಮಿ ವರೆಗೆ ಸುಮಾರು ₹475 ಕೋಟಿ ವೆಚ್ಚದಲ್ಲಿ ವಿಆರ್‌ಸಿ ಲೈನಿಂಗ್ ಮಾಡಲಾಗಿದೆ. ಸರಿಯಾದ ಗುಣಮಟ್ಟದಲ್ಲಿ ಕಾಮಗಾರಿ ಮಾಡದೇ ಕೇವಲ 20ಎಂ.ಎಂ ಹಾಗೂ 40 ಎಂ.ಎಂ ಜಲ್ಲಿ ಹಾಕಿ ಕಾಮಗಾರಿಯನ್ನು ಮುಗಿಸಿ ₹207 ಕೋಟಿ ಹಣವನ್ನು ಪಡೆಯಲಾಗಿದೆ’ ಎಂದು ಆರೋಪಿಸಿದರು.

ಅಲ್ಲದೇ ₹90 ಲಕ್ಷ ಹೆಚ್ಚುವರಿ ಅನುದಾನ ಹಾಕಿಸಿಕೊಂಡು ಹೇಮಾವತಿ ಇಲಾಖೆ ಎಂಜಿನಿಯರ್ ಹಾಗೂ ಜನಪ್ರತಿನಿಧಿಗಳು ಶಾಮೀಲಾಗಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಹೇಮಾವತಿ ನಾಲಾ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದೆ. ಕಾಮಗಾರಿ ನಿಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸಬೇಕು. ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂಲೋಕಾಯುಕ್ತರಿಗೆ ಪತ್ರ ಬರೆಯಲಾಗುವುದು
ಎಂದರು.

ಪ್ರತಿಭಟನೆ: ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳಬೆಲೆ ಏರಿಕೆ ಖಂಡಿಸಿ ಅ.18ರಂದು ತುರುವೇಕೆರೆ ಸಿಎಸ್ ಪುರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಪಿಎಂಸಿ ನಿರ್ದೇಶಕ ವಿಜಯಕುಮಾರ್, ಮುಖಂಡರಾದ ಯೋಗಾನಂದ್, ರಮೇಶ್, ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT