ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: 2,665 ಮಂದಿ ಗುಣಮುಖ

Last Updated 19 ಆಗಸ್ಟ್ 2020, 16:21 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 103 ಮಂದಿ ಗುಣಮುಖರಾಗಿ ಬುಧವಾರ ಆಸ್ಪತ್ರೆಗಳು ಹಾಗೂ ಕೋವಿಡ್ ಕೇರ್ ಕೇಂದ್ರಗಳಿಂದ ಬಿಡುಗಡೆಯಾದರು. ಇಲ್ಲಿಯವರೆಗೂ ಜಿಲ್ಲೆಯಲ್ಲಿ 2,665 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಬುಧವಾರ ಮತ್ತೆ 171 ಮಂದಿಯಲ್ಲಿ ಸೋಂಕು ದೃಢವಾಗಿದೆ. ಅಲ್ಲದೆ ಮೂರು ಸಾವಿನ ಪ್ರಕರಣಗಳು ಘಟಿಸಿವೆ. ಸದಾಶಿವನಗರದ 50 ವರ್ಷದ ಪುರುಷ, ಕುಣಿಗಲ್ ತಾಲ್ಲೂಕು ಗೊಟ್ಟಿಕೆರೆ 70 ವರ್ಷದ ಪುರುಷ, ಕುಣಿಗಲ್‌ನ ‘ಡಿ’ ಗ್ರೂಪ್ ಬಡಾವಣೆ 79 ವರ್ಷದ ಪುರುಷ ಮೃತಪಟ್ಟಿದ್ದಾರೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ 117 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಸೋಂಕು ದೃಢಪಟ್ಟವರಲ್ಲಿ ಐದು ವರ್ಷದೊಳಗಿನ ನಾಲ್ಕು ಮಕ್ಕಳೂ ಇದ್ದಾರೆ. 100 ಪುರುಷರು, 71 ಮಹಿಳೆಯರಲ್ಲಿ ಸೋಂಕು ಇದೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕಕ್ಕೆ ಒಳಪಟ್ಟಿದ್ದ 6,930 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಇಲ್ಲಿಯವರೆಗೂ ಕನಿಷ್ಠ ಪ್ರಕರಣಗಳು ದಾಖಲಾಗಿದ್ದರೆ, ತುಮಕೂರಿನಲ್ಲಿ ಗರಿಷ್ಠ ಪ್ರಕರಣಗಳು ಇವೆ. ಕುಣಿಗಲ್, ತಿಪಟೂರಿನಲ್ಲೂ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.

*****

ತಾಲ್ಲೂಕು;ಇಂದಿನ ಸೋಂಕಿತರು (ಆ.19);ಒಟ್ಟು ಸೋಂಕಿತರು;ಮರಣ

ಚಿ.ನಾ.ಹಳ್ಳಿ;5;178;3

ಗುಬ್ಬಿ;6;225;5

ಕೊರಟಗೆರೆ;7;227;2

ಕುಣಿಗಲ್;21;388;8

ಮಧುಗಿರಿ;21;242;3

ಪಾವಗಡ;24;311;6

ಶಿರಾ;10;268;6

ತಿಪಟೂರು;18;279;6

ತುಮಕೂರು;50;1,417;76

ತುರುವೇಕೆರೆ;9;214;2

ಒಟ್ಟು;171;3,749;117

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT