ಮಂಗಳವಾರ, ಅಕ್ಟೋಬರ್ 22, 2019
21 °C

50 ವರ್ಷದ ವ್ಯಕ್ತಿಯಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

Published:
Updated:

ತುಮಕೂರು: ನಗರದ ಈದ್ಗಾ ಮೊಹಲ್ಲಾ ಬಡಾವಣೆಯ ಚಾಂದಿನಿ ಚೌಕ್ ಸಮೀಪದ ಶನಿವಾರ ಸಂಜೆ 50 ವರ್ಷದ ನಸ್ರುಲ್ಲಾ ಎಂಬಾತ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಬಾಲಕಿ ಮತ್ತು ಆರೋಪಿ ಪರಿಚಿತರೇ ಆಗಿದ್ದಾರೆ. ಆರೋಪಿ ಗ್ಯಾರೇಜ್ ನಡೆಸುತ್ತಿದ್ದಾನೆ. ಬಾಲಕಿ ಇಸ್ತ್ರಿ ಅಂಗಡಿಯೊಂದರ ಬಳಿ ಬಟ್ಟೆ ತೆಗೆದುಕೊಂಡು ಹೋಗಲು ಬಂದಿದ್ದಾಳೆ. ಅಲ್ಲಿಂದ ಮನೆಗೆ ಮರಳುವಾಗ ಆರೋಪಿ ಬಾಲಕಿಯನ್ನು ತನ್ನ ಗ್ಯಾರೇಜ್‌ಗೆ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಲಕಿಯ ವೈದ್ಯಕೀಯ ತಪಾಸಣೆ ನಡೆಸಲಾಯಿತು. ‘ವೈದ್ಯಕೀಯ ತಪಾಸಣೆ ವರದಿ ಬಂದ ನಂತರ ಅತ್ಯಾಚಾರ ನಡೆದಿದೆಯೇ ಇಲ್ಲವೆ ಎನ್ನುವುದು ತಿಳಿಯಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳಾ ಠಾಣೆ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)