ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕಳವು ಪ್ರಕರಣ: ಮೂವರ ಬಂಧನ; ₹ 4 ಲಕ್ಷ ಮೌಲ್ಯದ ವಸ್ತು ವಶ

Last Updated 13 ಮೇ 2019, 12:39 IST
ಅಕ್ಷರ ಗಾತ್ರ

ಕೊರಟಗೆರೆ: ದ್ವಿಚಕ್ರವಾಹನ ಸೇರಿದಂತೆ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.

ತುರುವೇಕೆರೆ ವಿನೋಬನಗರ ನಿವಾಸಿ ವೆಂಕಟೇಶ, ತುಮಕೂರು ಬೆಳಗುಂಬ ರಸ್ತೆ ನಿವಾಸಿ ಗೋಪಾಲ್ ಪ್ರಧಾನ್, ತುಮಕೂರು ಕೋತಿ ತೋಪು ನಿವಾಸಿ ಕೃಷ್ಣ ಬಂಧಿತ ಆರೋಪಿಗಳು.

ಜ. 28ರಂದು ರಾತ್ರಿ ತಾಲ್ಲೂಕಿನ ತೋವಿನಕೆರೆ ಗ್ರಾಮದ ನರಸಿಂಹಮೂರ್ತಿ ಎಂಬುವರ ಮನೆಯಲ್ಲಿ ಸುಮಾರು ₹ 1.62 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಒಡವೆಗಳ ಕಳವು ನಡೆದಿತ್ತು. ಈ ಬಗ್ಗೆ ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಸಿಪಿಐ ಎಫ್‌.ಕೆ.ನದಾಫ್‌ ಹಾಗೂ ಪಿಎಸ್‌ಐ ಬಿ.ಸಿ.ಮಂಜುನಾಥ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಒಟ್ಟು 9 ಪ್ರಕರಣಗಳಲ್ಲಿ ಬಂಧಿತರು ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತರಿಂದ ₹ 1.62 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಒಡವೆ, ಸುಮಾರು ₹ 1.80 ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನ, ಒಂದು ಎಲ್‌ಇಡಿ ಟಿವಿ, 3 ಮೊಬೈಲ್‌ ಸೇರಿದಂತೆ ಒಟ್ಟು ₹ 4 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಮಧುಗಿರಿ ಡಿವೈಎಸ್‌ಪಿ ಶ್ರೀನಿವಾಸಮೂರ್ತಿ ಮಾರ್ಗದರ್ಶನದಲ್ಲಿ ಸಿಪಿಐ ನದಾಫ್‌, ಪಿಎಸ್ಐ ಮಂಜುನಾಥ್‌, ಸಿಬ್ಬಂದಿ ರಾಮಚಂದ್ರಯ್ಯ, ಲೋಹಿತ್‌, ಸೋಮನಾಥ, ಶಿವಪ್ರಸಾದ್, ದೊಡ್ಡಲಿಂಗಯ್ಯ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT