ಸ್ತಬ್ಧಚಿತ್ರದ ಮುಂದಿನ ಅರ್ಧ ಭಾಗ ಸಿದ್ಧರಬೆಟ್ಟ, ಹಿಂದಿನ ಅರ್ಧ ಭಾಗದಲ್ಲಿ ಮಧುಗಿರಿ ಏಕಶಿಲಾ ಬೆಟ್ಟ, ಚನ್ನರಾಯನದುರ್ಗ ಪ್ರತಿಕೃತಿ ಬರಲಿದೆ. ಮುಂಭಾಗದಲ್ಲಿ ಸಿದ್ಧರಬೆಟ್ಟ, ಸಿದ್ಧೇಶ್ವರ ಸ್ವಾಮಿ ಮತ್ತು ಗುಹೆ, ಮೆಟ್ಟಿಲುಗಳು, ಮಹಾದ್ವಾರ ಮೂಡಿ ಬಂದಿದೆ. ಮಧುಗಿರಿ ಮತ್ತು ಚನ್ನರಾಯನದುರ್ಗದ ಅರಸರ ಚಿತ್ರ, ಶಾಸನ, ವೀರಗಲ್ಲು, ದೇವಾಲಯಗಳ ಪ್ರತಿಕೃತಿ ಕಾಣಬಹುದು.