ತೋವಿನಕೆರೆ: ಗ್ರಾಮದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಶಾಖೆಯನ್ನು ಪ್ರಾರಂಭಿಸಲು ಮಾಜಿ ಅಧ್ಯಕ್ಷ ಕೆ.ಎನ್.ರಾಜಣ್ಣ ತಿರ್ಮಾನಿಸಿದ್ದು, ಚುನಾವಣೆಗಳು ಮುಗಿದ ನಂತರ ಪ್ರಾರಂಭಿಸುವ ಭರವಸೆ ನೀಡಿದ್ದಾರೆ ಎಂದು ನಿರ್ದೇಶಕ ಎಸ್.ಹನುಮಾನ್ ತಿಳಿಸಿದರು.
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕೊರಟಗೆರೆ ತಾಲ್ಲೂಕು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಹನುಮಾನ್ ಅವರಿಗೆ ಮಂಗಳವಾರ ತೋವಿನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತೋವಿನಕೆರೆ ಗ್ರಾಮದ ಪತ್ತಿನ ಸಹಕಾರ ಸಂಘದ ಮೂಲಕ ಮುಂದಿನ ದಿನಗಳಲ್ಲಿ ಗೊಬ್ಬರ, ರಾಸಾಯನಿಕ ಔಷಧಿ, ಬೀಜಗಳನ್ನು ಮಾರಾಟ ಮಾಡಿಸುವ ಬಗ್ಗೆ ಕ್ರಮ ತೆಗೆದು ಕೊಳ್ಳುವುದಾಗಿ ತಿಳಿಸಿದರು.
ಬಿ. ಹನುಮಂತರಾಯಪ್ಪ, ಎಸ್.ಕೆ.ರಂಗನಾಥ ಸಭೆಯಲ್ಲಿ ಮಾತನಾಡಿದರು. ಅಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷರಾದ ಕಾಂತಪ್ಪ, ಕುರಂಕೋಟೆ ಸಿದ್ಧರಾಜು, ಜೋನಿಗರಹಳ್ಳಿ ನಾಗಣ್ಣ, ಟಿ.ಬಿ.ಅನಂದಕುಮಾರ್ ಜೈನ್, ಕೆಂಚಪ್ಪ, ಸೀತರಾಮಯ್ಯ ಅಮ್ಮಾಜಕ್ಕ ಹಾಜರಿದ್ಧರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.