ಸೋಮವಾರ, ಆಗಸ್ಟ್ 15, 2022
24 °C

ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಆಯ್ಕೆ; ಮತ್ತೆ ಅಧ್ಯಕ್ಷ ಸ್ಥಾನದತ್ತ ಕೆ.ಎನ್.ರಾಜಣ್ಣ

ಪ್ರಜಾವಾಣಿ ಆಯ್ಕೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಬುಧವಾರ ನಡೆದ ಚುನಾವನೆಯಲ್ಲಿ 14 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತುಮಕೂರು ಕ್ಷೇತ್ರದಿಂದ ಕೆ.ಎನ್‌. ರಾಜಣ್ಣ, ಕೊರಟಗೆರೆ ಕ್ಷೇತ್ರದಿಂದ ಎಸ್‌.ಹನುಮಾನ್‌, ಚಿಕ್ಕನಾಯಕನಹಳ್ಳಿಯಿಂದ ಎಸ್‌.ಆರ್‌.ರಾಜಕುಮಾರ, ಮಧುಗಿರಿಯಿಂದ ಜಿ.ಜೆ.ರಾಜಣ್ಣ, ತಿಪಟೂರು ಕ್ಷೇತ್ರದಿಂದ ಕೆ.ಷಡಕ್ಷರಿ ಆಯ್ಕೆಯಾಗಿದ್ದಾರೆ.

ಶಿರಾ ಕ್ಷೇತ್ರದಿಂದ ಜಿ.ಎಸ್‌ ರವಿ, ಪಾವಗಡದಿಂದ ಟಿ.ಎನ್‌.ನರಸಿಂಹಯ್ಯ, ತುರುವೇಕೆರೆ ಎಂ.ಸಿದ್ದಲಿಂಗಪ್ಪ, ಗುಬ್ಬಿ ಎಚ್‌.ಸಿ.ಪ್ರಭಾಕರ್‌, ಕುಣಿಗಲ್‌ ಕ್ಷೇತ್ರದಿಂದ ಬಿ.ಶಿವಣ್ಣ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಜಯ್ ವಿ. ತಿಳಿಸಿದ್ದಾರೆ.

ತುಮಕೂರು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಕ್ಷೇತ್ರದಿಂದ ಆರ್‌.ರಾಜೇಂದ್ರ, ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ವ್ಯವಸಾಯೇತರ ಪತ್ತಿನ ಸಹಕಾರ ಸಂಘ ಕ್ಷೇತ್ರದಿಂದ ಎಸ್.ಲಕ್ಷ್ಮಿನಾರಾಯಣ, ಇನ್ನಿತರ ಸಹಕಾರ ಸಂಘಗಳ ಕ್ಷೇತ್ರದಿಂದ ಬಿ.ನಾಗೇಶ್ ಬಾಬು ಮತ್ತು ಮಹಿಳಾ ಸಹಕಾರ ಸಂಘಗಳ ಕ್ಷೇತ್ರದಿಂದ ಅನ್ನಪೂರ್ಣ ವೆಂಕಟನಂಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.